Sunday 30 March 2014

           ಯುಗಾದಿ 



ಬಂತು ಮತ್ತೊಂದು ಯುಗದ ಆದಿ 
ಬೇವೇನು, ಬೆಲ್ಲವೇನು 
ನಾನಂತೂ ಹಾಡಲು ಸಿದ್ಧವಾಗಿದ್ದೇನೆ 
ಹರುಷ ಗೀತೆಗೆ ನಾಂದಿ.. 

ನನ್ನವರು ನನ್ನವರಲ್ಲದವರು ಎಲ್ಲರಿಗೂ, 
ದೇವರೇ ಎರೆದುಬಿಡು ಬೆಲ್ಲದ ಸವಿರುಚಿ, 
ಹಿತಮಿತವಾಗಿರಲಿ ಕಹಿ.. 

ಬೆಲ್ಲದ ಸವಿ ಉಣ್ಣುತ್ತಲೇ ಬಂದವರಿಗೆ 
ಈ ವರುಷವೂ ಇರಲಿ ಬರಿಯ ಸಿಹಿ 
ಬಂದರೆ ಬರಲಿ ಸಕ್ಕರೆ ಖಾಯಿಲೆಯ ನೋವು...   
ಹಾ! ಮತ್ತೆ ಚುನಾವಣೆ ಬಂತಲ್ಲವೇ 
ಭ್ರಷ್ಟರಿಗೆಲ್ಲ ತೋರಿಸಿಯೇ ಬಿಡು
ಸೋಲಿನ ಕಹಿ ಬೇವು ... 

ಭಗವಂತ ಇಗೋ ಕೇಳು ನನ್ನ ಅಹವಾಲು 
ನಿನ್ನ ಪಾಕಶಾಲೆಯಿಂದ ನನಗಾಗಿ ತಯಾರಾಗುತ್ತಿರುವ 
ರಸಾಯನಕ್ಕೆ ಬೆಲ್ಲದ ಕೈ ಸ್ವಲ್ಪ ಮುಂದೇ ಇರಲಿ 
ಕಹಿ ಉಂಡು ಸಾಕಾಗಿದೆ.. 
ಜೊತೆಗಿರಲಿ ಒಂದಿಷ್ಟು ಹುಣಸೆ ಹುಳಿಯ ಮಜ  
ಮತ್ತೆ ಒಂಚೂರು ಮಾವಿನ ಚಿಗುರಿನ ಒಗರು..!

ಯುಗ ಯುಗಾದಿ ಕಳೆದರು ಮತ್ತೆ ಬರುವ ಯುಗಾದಿಯಂತೆ 
ಸುಲಲಿತವಾಗಲಿ ಎಲ್ಲರ ಬಾಳು, ಆ ಕೋಗಿಲೆ ದನಿಯ ಇಂಪಿನಂತೆ.. :) :)










6 comments:

  1. ಚೆನಾಗಿದೆ...ಭಗವಂತ ಇಗೋ ಕೇಳು ಎಂಬಲ್ಲಿ ಆಕರ್ಷಿಸ್ತೀರಿ :)

    ReplyDelete
  2. ಚುನಾವಣೆ ಸಾಲು ತಂಬಾ ಚೆನ್ನಾಗಿದೆ

    ReplyDelete
  3. ಚಪ್ಪಾಳೆ...
    ಬಂದರೆ ಬರಲಿ ಸಕ್ಕರೆ ಖಾಯಿಲೆಯ ನೋವು...
    ಹಾ! ಮತ್ತೆ ಚುನಾವಣೆ ಬಂತಲ್ಲವೇ
    ಭ್ರಷ್ಟರಿಗೆಲ್ಲ ತೋರಿಸಿಯೇ ಬಿಡು
    ಸೋಲಿನ ಕಹಿ ಬೇವು ...

    ReplyDelete
  4. Nice one... Happy Yugadi to you too...

    ReplyDelete
  5. That Neem leaf gives a good appeal.

    ReplyDelete