Saturday 16 November 2013

ಹಸಿವು


   ಹಸಿವು 


ಎಂಥ ಕಸುವೋ ಅಣ್ಣಾ 
ಈ ಹಸಿವಿಗೆ……
ಮನುಕುಲವ ಹಾಳುಗೆಡಿಸುತ್ತಿರುವ 
ಕಲಿಯುಗದ ಈ ಹಸಿವಿಗೆ
ಎಂಥ ಕಸುವೋ ಅಣ್ಣಾ ….


ಹಿಂದೊಮ್ಮೆ ಬುಧ್ದನೊಬ್ಬ ಅರ್ದರಾತ್ರಿ ಎದ್ದು ನಡೆದಿದ್ದ
ಮುಕ್ತಿಯ ಹಸಿವೆಗೆ…
ಮತ್ತೊಬ್ಬ ಕಂದ, ಬಸವ ಪರಿವಾರ ಬಿಟ್ಟು ನಡೆದಿದ್ದ
ಲೋಕಕಲ್ಯಾಣದ ಹಸಿವೆಗೆ..
ಅಂದೊಬ್ಬ ವಿವೇಕಾನಂದ ಧೀಮಂತನಾಗಿ ಎದ್ದು ನಿಂತಿದ್ದ
ಜ್ನಾನದ ಹಸಿವೆಗೆ…
ಅಕ್ಕ ಒಬ್ಬಳು ಸರ್ವಸಂಗ ಪರಿತ್ಯಾಗಿಯಾದಳು
ಭಕ್ತಿ ಪರಾಕಾಷ್ಟೆಯ ಹಸಿವೆಗೆ…
ಅಲ್ಲೊಬ್ಬ ಸಂಗೊಳ್ಲಿ ರಾಯ ಜೀವ ತೆತ್ತಿದ್ದ
ದೇಶಪ್ರೇಮದ ಹಸಿವೆಗೆ…


ಆದರೆ ಈ ಕಲಿಯುಗದ ಹಸಿವೆ ಎಂಥದೊ ಅಣ್ನಾ..
ಪ್ರಳಯದ ಕೊಸರಿನಂತೆ ಈ ಹಸಿವು..
ಹೆಬ್ಬಾವಿನ ಬುಸುಗುಡುವಿಕೆಯಂತೆ ಈ ಹಸಿವು..
ಭೂ ಗರ್ಭದ ಲಾವಾರಸದಂತೆ ಈ ಹಸಿವು..!!!
ಇಲ್ಲೊಬ್ಬನಿಗೆ ತೀರದ ಅಧಿಕಾರದ ಹಸಿವು..
ಹಗರಣಗಳ ಕೊಚ್ಚೆಯಲ್ಲಿ ಬಿದ್ದು ನರಳುತ್ತಿದ್ದರೂ
ದೇಶವನ್ನಾಳುವ ಹಸಿವು..
ಜಾತೀಯತೆಯ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಹಸಿವು..
ಮತ್ತೊಬ್ಬನಿಗೆ ಭೂತಾಯಿಯ ಎದೆಬಗೆದು
ಮಣ್ನು ಮಾರಿದರೂ ತೀರದ ಹಣದ ಹಸಿವು..
ಇನ್ನೊಬ್ಬನಿಗೆ, ಕಾವಿ ತೊಟ್ಟು ಪ್ರವಚನ ಪಠಿಸಿದರೂ
ಹಾಗೇ ಉಳಿದಿರುವ ದೇಹದ ಹಸಿವು…!!!!


ಎಂಥ ಕಸುವೋ ಅಣ್ನಾ ಕಲಿಯುಗದ ಈ ಹಸಿವಿಗೆ..??
ಕಾದುನೋಡೋಣ, ಏನಾದರೂ ಮಾಡೋಣ,
ಕುಸಿಯುತ್ತಿರುವ ಮ್ಉಲ್ಯಗಳ ಮತ್ತೆ ಎತ್ತಿಹಿಡಿದು
ದಿವ್ಯಪಥದತ್ತ ನಡೆಸುವ಻ ಹಸಿವಿಗೆ….

Friday 18 October 2013


 ತಪ್ಪು...

ತಪ್ಪೊಂದು ಮಾಡಿರುವೆ ನಾ 

ನಿನ್ನ ನಾ ನೆಚ್ಚಿಕೊಂಡುಬಿಟ್ಟೆ

 ಈ ನನ್ನ ಎಲ್ಲವನ್ನು ನಿನ್ನ ಹೆಸರಿಗೆ ಬರೆದುಬಿಟ್ಟೆ..... 


ನೀ ಎಲ್ಲರಿಗಿಂತ ಹತ್ತಿರ ಈಗ

 ನೀನೇ ನನ್ನ ವಿಧಿಲಿಖಿತ 

ಹೀಗೆಲ್ಲ ಅನಿಸುತ್ತಿದೆ ಈಗ

 ತಪ್ಪೊಂದು ಮಾಡಿರುವೆ ನಾ... 


ಬಗೆದುಕೊಟ್ಟಷ್ಟು ಮುಗಿಯದ ಪ್ರೀತಿ

 ಲೆಕ್ಕವಿಲ್ಲದಷ್ಟು ಕನಸುಗಳ ಭಿತ್ತಿ 

ನನ್ನಿರುವಿಕೆಯ ಮೀರಿ, ಪ್ರೀತಿಸಿ ನಿನ್ನ

 ತಪ್ಪೊಂದು ಮಾಡಿರುವೆ ನಾ.... 


ಯಾವ ನೋವೂ ಇಲ್ಲ ಈಗ 

ಸಣ್ಣ ಸಂದೇಹಕ್ಕೂ ಇಲ್ಲ ಜಾಗ

 ತಪ್ಪು ಒಪ್ಪುಗಳೆಲ್ಲ ಗೌಣವೀಗ 

ತಪ್ಪೊಂದು ಮಾಡಿರುವೆ ನಾ... 


ಮಾಡಿಬಿಡು ಒಂದು ಸಣ್ಣ ಉಪಕಾರ

 ಹೋಗದಿರು ನನ್ನಿಂದ ಎಂದಿಗೂ ದೂರ 

ತಪ್ಪೊಂದು ಮಾಡಿರುವೆ ನಾ

ನಿನ್ನ ನೆಚ್ಚಿಕೊಂಡುಬಿಟ್ಟೆ ನಾ..... 

Wednesday 5 June 2013



 ಲೈಫು  ಇಷ್ಟೇನಾ..!!!


ಇಂದು ಬೆಳಗ್ಗೆ ಇ-ಪತ್ರಿಕೆ ತೆರೆಯುತ್ತಿದ್ದಂತೆ ಸುದ್ದಿ ನೋಡಿ ತುಂಬಾ ಬೇಜಾರಾಯಿತು, ‘’25ರ ಹರೆಯದ, ಬಾಲಿವುಡ ನಟಿ ಜಿಯಾ ಖಾನ, ಮುಂಬಯಿಯ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ’’.
ಈ ಜಿಯಾ ಖಾನಳನ್ನು ಅವಳ ಪ್ರಥಮ ಚಿತ್ರ ‘’ನಿಶ್ಯಬ್ದ’’ ದಲ್ಲಿ ನೋಡಿ ತುಂಬ ಮೆಚ್ಚಿಕೊಂಡಿದ್ದೆ ನಾನು, ಲಕ್ಕಿ ಗರ್ಲ, ಮೊದಲ ಚಿತ್ರದಲ್ಲೆ ಬಿಗ ಬಿ ಅಮಿತಾಬ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದುಕೊಂಡಿದ್ದೆ. ಚೆಂದದ ಹುಡುಗಿ, ಪ್ರತಿಭಾವಂತೆ, ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ಪ್ರಶಂಸಾರ್ಹ ಅಭಿನಯ ನೀಡಿದ್ದಳು. ಇಂತಿಪ್ಪ ಜಿಯಾ ಖಾನಳ ಸಾವಿನ ಸುದ್ದಿಯೊಂದಿಗೆ, ಗ್ಲಾಮರ ಲೋಕದ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ.

ಇರಲಿ, ಈ ಬ್ರಿಟಿಶ- ಇಂಡಿಯನ, ಜಿಯಾ ಒಬ್ಬ ಸಿನೆಮಾ ತಾರೆಯ ಹೊರತಾಗಿ, ಮೊದಲು ಒಂದು ಹೆಣ್ಣು , 25ರ ಹರೆಯದ ಯುವತಿ, ಇನ್ನೂ ಬಾಳಿ ಬದುಕಬೇಕಿದ್ದ ಜೀವ. ರೂಪ, ಪ್ರತಿಭೆ, ಅವಕಾಶ ಎಲ್ಲವೂ ಇದ್ದು ಹೀಗೆ ಅನಾಮತ್ತಾಗಿ ಜೀವ ಕಳೆದುಕೊಳ್ಲುವ ನಿರ್ಧಾರ ಕೈಗೊಂಡದ್ದಾದರೂ ಏಕೆ?? ದುಖಃ, ಹತಾಶೆ, ಜೀವನದ ಒಂದು ಕಾಲಘಟ್ಟದಲ್ಲಿ ಧುತ್ತೆಂದು ಬಂದುನಿಲ್ಲುವ ಏಕಾಂಗಿತನ, ಮೋಸಮಾಡಿದ ಪ್ರೀತಿ ಈ ಹುಡುಗಿಯ ಜೀವ ತೆಗೆದುಕೊಂಡುಬಿಟ್ಟಿತೇ???
ಈ ಜಿಯಾ ಖಾನಳ ಸಾವಿನೊಂದಿಗೆ ಇಲ್ಲಿ ನಾನು ಹೇಳಬೇಕೆಂದಿರುವ ವಿಷಯ, ಈ 25-30ರ ಹೊಸ್ತಿಲಲ್ಲಿ ನಿಂತಿರುವ  ಎಲ್ಲ ಹುಡುಗಿಯರ ಹಾಡು, ಪಾಡು, ನೋವು, ನಲಿವುಗಳ ಬಗ್ಗೆ.

ಇದೇ ವಯಸ್ಸಿನ  ಆಸುಪಾಸಿನಲ್ಲಿರುವ ನಾನು ಮತ್ತು ನನ್ನ ಹಿಂಡು ಗೆಳತಿಯರು ((((ಮದುವೆ ಆದವರು, ಮದುವೆ ಆಗದೇ ಇರುವವರು,ಸಂಗಾತಿಯ  ಹುಡುಕಾಟದಲ್ಲಿರುವವರು) ಆಗಿಂದಾಗ ದಂಡು ಸೇರಿ ವಿಚಾರ ವಿನಿಮಯ ಮಾಡಿಕೊಳ್ಲುವುದುಂಟು, ಅನೇಕರು ನನ್ನಲ್ಲಿ ಸಲಹೆ ಕೇಳಿಕೊಂಡುಬಂದು, ಸ್ವಲ್ಪ ಸಮಾಧಾನ ಹೊತ್ತೊಯ್ದಿದ್ದು ಇದೆ. ಇನ್ನೂ ಕೆಲವೊಮ್ಮೆ ನನಗೆ ಸಮಾಧಾನ ಮಾಡುವರೂ ಇದ್ದಾರೆ. ಈ ವಯಸ್ಸೆ ಹೀಗೆ, ತುಂಬಾ ಗೊಂದಲಗಳು,  25 ಆಗೇ ಬಿಟ್ಟಿತಲ್ಲಾ ಎಂಬ ದುಮ್ಮಾನ, ಇನ್ನೂ ಸಾಧಿಸಬೇಕಿರುವುದು ತುಂಬ ಇದೆ ಆದರೆ ಸಮಯವಿಲ್ಲ  ಎಂಬ ಧಾವಂತ, ತಲೆ ತುಂಬ ಗಿರುಗುಟ್ಟುವ ಸಾವಿರ ಚಿಂತೆಗಳು. ಮದುವೆ ಆದವರಿಗೆ am no more single ಅನ್ನೋ ಚಿಂತೆ ಆದರೆ, ಮದುವೆ ಆಗದವರಿಗೆ   Getting married is the end of the world…!!!

ಒಟ್ಟಾಗಿ ಹೇಳಬೇಕೆಂದರೆ, ಚಿಕ್ಕಂದಿನಿಂದ ಏನೇನೋ ಆಸೆ ಕನಸುಗಳನ್ನು ಹೊತ್ತ ಜೀವ, ಒಂದು ಯಶಸ್ಸು, ಕೀರ್ತಿ, ಸಣ್ಣ  ಪ್ರಶಂಸೆಗಾಗಿ ಹಂಬಲಿಸುತ್ತಾ ಓಡಿ ಓಡಿ ಬಂದು ಈ 25ರ  ಅಂಚಿನಲ್ಲಿ ಧುತ್ತೆಂದು ನಿಂತುಕೊಳ್ಲುತ್ತದೆ, ಬದುಕು ಸಾಕೆನಿಸುತ್ತದೆ, ಏಕಾಂಗಿತನ ಆವರಿಸತೊಡಗುತ್ತದೆ, ಎಲ್ಲವೂ ಇದ್ದೂ ಏನೂ ಇಲ್ಲವೆಂಬ ದಿವ್ಯ ನಶ್ವರ, ಒಂದು ನಿಷ್ಕಲ್ಮಶ ಪ್ರೀತಿಗಾಗಿ ಹಾತೊರೆತ ಮತ್ತು ಅದು ಸಿಗದೇ ಹೋದಾಗ ತಮ್ಮನ್ನು ತಾವೇ ಅಧಃಪತನಕ್ಕೆ ಎಳೆದುಕೊಳ್ಲುವ ಹುಂಬತನ, ಏನೇನೋ ಮಾಡಬೇಕೆಂದುಕೊಂಡು ಏನೇನೋ ಮಾಡಿದೆವಲ್ಲ  ಇದೇ ಜೀವನವಾ ಎಂಬ ಕಠೋರ ಸತ್ಯದ ದರ್ಶನ, ಕಾಲವೇ ಒಂದು ಸಲ ನಿಂತಂತೆ, ಎಲ್ಲೆಲ್ಲೂ ಬರೀ ಸೋಲು, ನಿರಾಸೆ, ದುಃಖಗಳು  its enough, am done ಎಂಬ ನಿರಾಶಾ ಭಾವ…!!

ಈ ಎಲ್ಲ ಧಾವಂತಗಳಿಗೆ ನಾನೂ ಕೂಡ ಹೊರತಾಗಿಲ್ಲ, ಆದರೆ ಇಂಥ ಕಠಿಣ ಪರಿಸ್ಥಿತಿಗಳಲ್ಲಿ ನನಗೆ ಸ್ಫೂರ್ತಿ ನೀಡುವುದು, ಜೀವನೋತ್ಸಾಹದ ಚಿಲುಮೆಯಂತಿರುವ ನನ್ನವ್ವ ಮತ್ತು ಅವಳ ಮಾತುಗಳು. ನನ್ನವ್ವ ಹೇಳುತ್ತಾಳೆ ‘’ಜೀವನಾ ಭಾಳ ದೊಡ್ಡದು, ಯಾವದಕ್ಕೂ ಹೆದರಬಾರ್ದು, ಧೈರ್ಯ ಇರಬೇಕು ಹೆಣ್ಮಕ್ಕಳಿಗೆ, ಏನ ಬಂದ್ರು ಎದರಸೋ ಶಕ್ತಿ ಇರಬೇಕ, ಎಲ್ಲಾನೂ ನಕ್ಕೋತ ಸ್ವೀಕಾರ ಮಾಡಬೇಕವಾ ನನ್ನ ಬಂಗಾರಿ, be bold, ಕಾಲ ಎಲ್ಲವನ್ನೂ ಸರಿ ಮಾಡುತ್ತ, ಟೈಮ್ ಇಸ್ ದಿ ಮೆಡಿಸಿನ್ ''

  ಅತ್ತ ಕಡೆ ಕುಳಿತಿರುವ ನನ್ನ ಎಲ್ಲ ಹುಚ್ಚುಖೋಡಿ ಗೆಳತಿಯರೆ, ಇಂದು ನನಗಿಲ್ಲಿ ಕೆಲವೊಂದು ಅಂಶಗಳನ್ನು ನಮೂದಿಸಲೇಬೇಕಿದೆ, ಇವು ಖಂಡಿತ ಒಂದಲ್ಲ ಒಂದು ರೀತಿಯಲ್ಲಿ  ಉಪಯೋಗವಾಗುತ್ತವೆ ಎಂಬುದು ನನ್ನ ದಿವ್ಯ ನಿರೀಕ್ಷೆ .
·         ಮೊಟ್ಟಮೊದಲು ನೀವು ಮಾಡಬಹುದಾದ ಒಂದು ಒಳ್ಲೆ ಕೆಲಸವೆಂದರೆ, ನಿಮ್ಮ ಹಣೆಬರಹವನ್ನು ಹಳಿಯುವುದನ್ನ ನಿಲ್ಲಿಸಿ ಮತ್ತು ನಿಮಗಿಂತ ಹೀನ ಪರಿಸ್ಥಿತಿಯಲ್ಲಿರುವವರನ್ನ ನೋಡಿ ನೀವೆಷ್ಟು ಪುಣ್ಯವಂತರು ಎಂಬುದನ್ನ ನೆನೆಯಿರಿ.
·         ಜೀವನದ ಒಂದು ಪರಮಸತ್ಯದ  ಅನಾವರಣ ನಿಮ್ಮನ್ನು ನಿರ್ಲಿಪ್ತನನ್ನಾಗಿಸಿಬಿಡಬಹುದು ಹಾಗು ಅಷ್ಟೇ ಶಕ್ತಿವಂತರನ್ನಾಗಿಸಿಬಿಡಬಹುದು, ಅದೇನೆಂದರೆ, ‘’ಈ ಜೀವನದಲ್ಲಿ ಯಾವುದೂ ಸುಲಭವಲ್ಲ ಮತ್ತು ಏನೂ ಸುಲಭವಾಗಿ ಸಿಗುವುದಿಲ್ಲ. ಇದೊಂದು ಹೋರಾಟ ಹಾಗು ಈ ಹೋರಾಟವೇ ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ’’
·         ಆತ್ಮವಿಶ್ವಾಸ: ಇದೊಂದು ನಿಮ್ಮಲ್ಲಿ ದಂಡಿಯಾಗಿದ್ದರೆ, ಏನೇ ಸಮಸ್ಯ ಎದುರಾದರೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ, ಪ್ಲೀಸ ಧ್ರತಿಗೆಡಬೇಡಿ.  ಎಲ್ಲ ಸಣ್ನ ದೊಡ್ಡ ಪ್ರಾಬ್ಲಮ್ಸಗಳನ್ನು ಒಂದು ಬಿಗ್ hug  ನೊಂದಿಗೆ ಸ್ವಾಗತಿಸಿ, ಆಗ  ಅವೆಲ್ಲ ನಿಕ್ರಷ್ಟ  ಅನಿಸುತ್ತವೆ and you will feel bold enough to face them.

·         ಇನ್ನು ಕೆಲವೊಂದು ಸಣ್ನ ಸಣ್ನ ವಿಷಯಗಳು ನಿಮ್ಮ ದ್ಹೈರ್ಯದ , ಆತ್ಮವಿಶ್ವಾಸದ ಬುತ್ತಿಯನ್ನು ತುಂಬಿಕೊಟ್ಟು, ಟೆಂಪರರಿ ರಿಲೀಫ ಮತ್ತು ಉತ್ಸಾಹ ನೀಡುತ್ತವೆ, ಅವು ಹೀಗಿವೆ check out
1.      ತುಂಬಾ ಜಿಗುಪ್ಸೆ ಉಂಟಾಗಿ, ಥೂ ಏನ ಲೈಫು ಇದು   ಅನಿಸಿದಾಗ, just relax , ಹೊರಗೆ ಹೋಗಿ ಒಂದು ಸುತ್ತು ಓಡಾಡಿಬನ್ನಿ, ನಿಮ್ಮ ಸುತ್ತ ಮುತ್ತ ಏನೇನಾಗುತ್ತಿದೆ ನೋಡಿ, ಆಗ you will feel am not the only..
2.      ಸ್ವಲ್ಪ ಶಾಪಿಂಗ ಮಾಡಿ, ಹೊಸ ಹೇರಕಟ್ ಮಾಡಿಸಿ, groom up yourself,  look good and I bet u, ತುಂಬ ರಿಲ್ಯಾಕ್ಸ ಫೀಲ್ ಆಗ್ತೀರ.
3.     ಅತಿಯಾಗಿ ಏಕಾಂಗಿತನ ಕಾಡುತ್ತಿದ್ದರೆ, don’t creep.. ಒಳ್ಲೊಳ್ಲೆ ಪುಸ್ತಕಗಳನ್ನ ಓದಿ, ಚಂದದ ಸಿನೆಮಾ ನೋಡಿ, ಅದ್ಭುತವಾದ ಸಂಗೀತ ಕೇಳಿ
4.     ನೀವು ಬೇರೆಯವರಿಗೆ ಮಾಡುವ ಸಣ್ನ ಪುಟ್ಟ ಸಹಾಯಗಳು ಮತ್ತು ಸಹಾಯ ಪಡೆದವರ ಕಣ್ನಲ್ಲಿ ನಿಮ್ಮೆಡೆಗೆ ಮೂಡುವ  ಕ್ರತಜ್ನತಾಭಾವ ನಿಮಗೆ ಅದ್ಭುತ ಖುಷಿ ಕೊಡುತ್ತದೆ so don’t miss it, be open to help others,
5.    ಯಾವುದೇ ಕೆಲಸ ಮಾಡುತ್ತುದ್ದರೂ ಅದನ್ನ ಪ್ರೀತಿಸಿ, ನಿಯತ್ತಿನಿಂದ ಮಾಡಿ Keep yourself updated. ಇದು ಒಂದು ಅಧ್ವಾನ confidence  ಕೊಡುತ್ತದೆ
6.     ಎಲ್ಲೊ ಕಳೆದು ಹೋಗಿರುವೆ ಎನಿಸಿದಾಗ, Reinvent urself.
7.     ತುಂಬ ವಿಚಾರಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ, don’t get confused, ಒಂದು ಶಾಣ್ಯಾತನದ ಕೆಲಸ ಮಾಡಿ, ಒಂದು ಹಾಳೆಯಲ್ಲಿ ಎಲ್ಲವನ್ನು ಬರೆಯಿರಿ (ನಿಮ್ಮ ಗೊಂದಲಗಳು, ಅವಕ್ಕೆ ಕಾರಣಗಳು, ತೋಚುವ ಪರಿಹಾರಗಳು) ಮತ್ತು ಒಂದೆರಡು ಸಲ ಓದಿಕೊಳ್ಲಿ. ಆಗ ನಿಮ್ಮ ಮುಖದ ಮೇಲೆ ಮಂದಹಾಸ ಮೂಡದಿದ್ದರೆ ಕೇಳಿ
8.     ಪ್ರತಿ ದಿನವೂ different, ಒಂದು ತುಂಬಾ ಒಳ್ಲೆ ದಿನವಾದರೆ ಇನ್ನೊಂದು ಕೆಟ್ಟ ದಿನ ಇರಬಹುದು. Don’t creep about ur day and be thankful to god for the day.
9.     ‘’ನಾನು’’ ಎಂಬ ಒಂದು ಸಣ್ನ ಅಹಂ ಬೆಳೆಸಿಕೊಳ್ಲಿ. ನನ್ನಂತಹ ಅಧ್ವಾನ personality ಯನ್ನು ಯಕಶ್ಚಿತ ಈ ಸಮಸ್ಯೆ ಅಲುಗಾಡಿಸಬಹುದೇ ಎಂಬ ಧೋರಣೆ ಬೆಳೆಸಿಕೊಳ್ಲಿ ಮತ್ತು ಅದರೊಂದಿಗೇ ಸಮಸ್ಯೆಯನ್ನು ಎದುರಿಸಲು ಸನ್ನಧ್ದರಾಗಿ

ಇದೇನು ಗುಲ್ ಮೊಹರ್ ಬರೀ ಫಿಲಾಸಫಿ ಹೇಳುತ್ತಿದ್ದಾಳೆ ಅಂದುಕೊಳ್ಬೇಡಿ, ಇದೆಲ್ಲವೂ ಸ್ವ-ಅನುಭವದಿಂದ ಕಂಡುಕೊಂಡ ಪರಮಸತ್ಯಗಳು. ಲೈ ಫು ಇಷ್ಟೇನಾ ಅನ್ನಿಸಿದಾಗೆಲ್ಲ ಜೀವನೋತ್ಸಾಹ ನೀಡಿ ಇನ್ನೊಂದು ಪರಿಧಿಯೆಡೆಗೆ ನಡೆಸಿದ ಸತ್ಯಗಳು. Muft ka gyaan hai, le lo..:)J
ಇನ್ನು ಮುಗಿಸುವ ಮುನ್ನ, ನನಗೆ ತುಂಬ ಇಷ್ಟವಾದ ಮತ್ತು  ಜೀವನಪ್ರೀತಿಯನ್ನು ಕಲಿಸುವ   ಹಾಡೊಂದನ್ನು ನಿಮ್ಮ ಜೊತೆ ಶೇರ್ ಮಾಡಲೇಬೇಕಿದೆ. ಆ ಜಿಯಾ ಖಾನಳಂತೆ ಶೂನ್ಯಸಂಪಾದನೆಯೆಡೆಗೆ, ಜೀವ ತ್ಯಾಗ ಮಾಡಲು ಪ್ಲಾನ್ ಮಾಡುತ್ತಿರುವ ಎಲ್ಲರಿಗೆ ಈ ಹಾಡು.. ಲೈಫು  ಇಷ್ಟೇ ಅಲ್ಲಾ….!!! 
( ''ಡೋರ್" ಎಂಬ ಹಿಂದಿ ಚಿತ್ರದ ಹಾಡು- http://songspk.co/mp3/yeh-honsla-kaise-ruke.html)
Yeh Hosla Kaise Juke,
Yeh Aarzoo Kaise Ruke 

Manzil Muskil to kya,
Bundla Sahil to kya,
Tanha Ye Dil to Kya
Ho Hooo

Raah Pe Kante Bikhre agar,
Uspe to phir bhi chalna hi hai,
Saam Chhupale Suraj magar,
Raat ko ek din Dhalana hi hai,

Rut ye tal jayegi,
Himmat rang layegi,
Subha phir aayegi
Hoooo

Yeh Hosla Kaise Juke,
Yeh Aarzoo Kaise Ruke 

Hogi hame to rehmat ada,
Dhup kategi saaye tale,
Apni khuda se hai ye Dua,
Manzil lagale humko gale

Zurrat so baar rahe,
Uncha Ikraar rahe,
Zinda har pyar rahe
Hoooo

Yeh Hosla Kaise Juke,
Yeh Aarzoo Kaise Ruke 


( P.S. : ಈ ಪೋಸ್ಟನಲ್ಲಿ ತುಂಬಾ ಆಂಗ್ಲ ಪದಗಳ ಬಳಕೆ ಮಾಡಿದ್ದೀನಿ , ಕ್ಷಮೆಯಿರಲಿ )



Monday 4 February 2013


ಹೂ ಮುತ್ತು 





ಹಣೆಯ ಮೇಲಿಟ್ಟ ಹೂ ಮುತ್ತು
ಹೇಗಿತ್ತು  ಹೇಗಿತ್ತು  ಹೇಗಿತ್ತು
ಎಂದು ಪದೇ ಪದೇ ಕೇಳಿದರೆ ನಾನೇನು ಹೇಳಲಿ….



ಈ ಭೂಮಿಯ ಮೇಲಿನ  ನಿನ್ನ ಇರುವಿಕೆಯನ್ನು
ಕೇವಲ ನನಗಾಗಿ ಹೊತ್ತು ಬಂದಂತಿತ್ತು…..

ಆತ್ಮಕ್ಕೆ ತಟ್ಟಿ  ನನ್ನ  ಅಸ್ತಿತ್ವವನ್ನು ಎಚ್ಚರಿಸಿದಂತಿತ್ತು….

ಜಡಗಟ್ಟಿದ್ದ ನರಗಳ ಕೊಂಡಿ ಕಳಚಿಟ್ಟು ಜ್ಯೋತಿ ಬೆಳಗಿದಂತಿತ್ತು……

ನೊಸಲ ತುಂಬ ಹರಡಿದ್ದ  ನೆರಿಗೆಗಳನ್ನ
ಅದ್ಯಾವುದೋ ಮಾಂತ್ರಿಕ ಶಕ್ತಿ ಮಾಯ ಮಾಡಿದಂತ್ತಿತ್ತು…..

ನನ್ನ ದೇಹದ ಕಣ ಕಣದ ಶಕ್ತಿಯನ್ನ ಕೂಡಿಕೊಟ್ಟಂತ್ತಿತ್ತು…..

ಉಸಿರಲ್ಲಿ ಉಸಿರಾಗಿ, ಹೆಸರು ಮರೆವ ಆ ಕೊನೆ ಘಳಿಗೆವರೆಗೆ
ಜೊತೆಯಾಗಿರುವೆ ಎಂದು ನೀ ಕಿವಿಯಲ್ಲಿ ಉಸಿರಿದಂತ್ತಿತ್ತು…..

ನನ್ನೀ ಕಂಗಳಲ್ಲಿ ಇನ್ನು ಮೇಲೆ ಬರೀ  ದಿವ್ಯ ಬೆಳಕು ಎಂಬ
ಭರವಸೆಯ ಮಹಾನದಿಯೇ ಹರಿದು ಬಂದಂತ್ತಿತ್ತು…..



ಸಾಕು, ಇನ್ನೆಂದಿಗೂ ಕೇಳಬೇಡ….
ಹಣೆಯ ಮೇಲಿಟ್ಟ ಹೂ ಮುತ್ತು
ಹೇಗಿತ್ತು  ಹೇಗಿತ್ತು  ಹೇಗಿತ್ತು….





Wednesday 16 January 2013

ಪ್ರೇಮ ಶ್ರಾವಣ 


ಕಣ್ನಿನ ರೆಪ್ಪೆಗಳಡಿಯಲಿ ನೆನಪಿನ ದೀಪಗಳ ಸಾಲು
ಸಾಕಾಗಿದೆ ಈ ನೆರಳು ಬೆಳಕಿನ  ಆಟದ ಗೀಳು …

ಅವ ಹೇಳುತ್ತಾನೆ, ವೇಳೆ ಇಲ್ಲ ಈಗ ಪ್ರೀತಿಗೆ
ಕೊಂಚ ಸಾವರಿಸಿಕೊ, ಸ್ವಲ್ಪ ತಡೆ
ಏನೇನೂ ಅವಸರಿಸಬೇಡ, ಈಗಲ್ಲ ಮುಂದಿದೆ ಪ್ರೇಮ ಶ್ರಾವಣದ ಹೋಳಿಗೆ…!!!
ನಾ ಕೇಳುತ್ತೇನೆ, ಪ್ರೇಮಕ್ಕೂ  timetabale ಲ್ಲೇ..??
ನೀ ಹೇಳಿದಾಗ  ಉಕ್ಕಿ ಬರದಿದ್ದರೆ ಈ ಭಾವ..??
ಕೊನೆಯಿಲ್ಲವೆ ಈ ಕಾಯುವಿಕೆಯ ಸಂಕೋಲೆಗೆ..??

ಅವ ನಗುತ್ತಾನೆ, ತುಟಿಯಂಚಲ್ಲೆ, ಕಣ್ನ ಸನ್ನೆಯಲ್ಲೇ..
ನಾ ಜ್ವಾಲಾಮುಖಿಯಾಗುತ್ತೇನೆ ನಿಂತಲ್ಲಿ
ಕಣ್ನಲ್ಲಿ ಲಾವಾರಸ  ಉಕ್ಕುತ್ತದೆ
ಮತ್ತೆ ಶಾಂತಿ ಸಮಾರೋಹ
ಕರಗುವಂತೆ ಮಾಡುತ್ತಾನೆ ತನ್ನ ಬಾಹುಬಂಧನದಲ್ಲಿ
ಮತ್ತು ಪಿಸುಗುಡುತ್ತಾನೆ ಕಿವಿಯಲ್ಲಿ
ಈಗಲ್ಲ ಮುಂದಿದೆ ಪ್ರೇಮ ಶ್ರಾವಣದ ಹೋಳಿಗೆ…!!!!