Thursday 27 October 2011

ಹೀಗೊಂದಿಷ್ಟು ಗೀಚುಸಾಲುಗಳು

ಗೀಚು ೧:
                 ನಾನು ವಿಜ್ಞಾನವನ್ನು ನಂಬುತ್ತೇನೆ 
                          ಭೌತಶಾಸ್ತ್ರದಲ್ಲಿ ಹೇಳಿಲ್ಲವೇ ,
                          ಒಂದು ಜಾಗವನ್ನು, ಒಂದೇ ಸಮಯದಲ್ಲಿ 
                          ಎರಡು ವಸ್ತುಗಳು ಆಕ್ರಮಿಸಲು ಸಾಧ್ಯವಿಲ್ಲ ...!!!
                          ಅಂತೆಯೇ, ನಿನ್ನ ಎದೆಗೂಡನ್ನೆಲ್ಲ ನಾನೇ ಆಕ್ರಮಿಸಿರುವಾಗ 
                          ಬೇರೆ ಇನ್ನಾರು ಅಲ್ಲಿರಲು ಸಾಧ್ಯ...???
                          ನಾನು ವಿಜ್ಞಾನವನ್ನು ನಂಬುತ್ತೇನೆ........
ಗೀಚು ೨ :
                 ಈಗೀಗ ನನಗೆ  ಅನಿಸುತಿದೆ 
                         ನಿನ್ನ ಹೃದಯವನ್ನು ಯಾರೋ ಅತಿಕ್ರಮಣದಿಂದ 
                         ಸೇರಿದ್ದಾರೆ ಎಂದು......
                         ಅಂತೆಯೇ ನಾನು ಪಾಲಿಕೆಗೆ ಕಂಪ್ಲೇಂಟ್ ಕೊಟ್ಟಿರುವೆ 
                         ಅತಿಕ್ರಮಣದ ಜಾಗೆಯನ್ನು
                         ತೆರವುಗೊಳಿಸಲು.....
                         ಮತ್ತು ಅನುಮತಿಯನ್ನು ಪಡೆದಿರುವೆ 
                         ಅಲ್ಲೊಂದು ನನ್ನ ಕನಸಿನ,ಆಸೆಯ ಬೃಹತ್ 
                         ಇಮಾರತನ್ನು ಕಟ್ಟಲು.........:):)

ಗೀಚು ೩:
                     ಗೆಳೆಯಾ ನನ್ನ ಕಣ್ಣುಗಳು ದಣಿದಿವೆ
                           ನಿನ್ನ ಹಾದಿ ಕಾದು ಕಾದೂ 
                           ಅವುಗಳಿಗೀಗ ವಿಶ್ರಾಂತಿ ಬೇಕಿದೆ,
                           ನನ್ನ  ನಿಟ್ಟುಸಿರುಗಳ ಮತ್ತು ಕಣ್ಣೀರಿನ 
                           ಬಿಸಿ ಸಾಕಾಗುವುದಿಲ್ಲವಂತೆ...!!!
                           ನಿನ್ನ ತಂಪು ತುಟಿಗಳಿಂದ ಹೊರಚಿಮ್ಮುವ   
                           ನಿನ್ನೊಡಲಿನ ಬಿಸಿ ಉಸಿರೇ ಬೇಕಂತೆ
                           ಬಂದೊಮ್ಮೆ ಚುಂಬಿಸುವೆಯಾ
                           ಈ ದಣಿದಿರುವ ಕಂಗಳನು....???
        

                      

                      
                       

Tuesday 25 October 2011

ಮಳೆ ಬಂದ್ರೆ ಹಿಂಗೇ.. :)

 

 ಹೊರಗಡೆ  ಮಳೆ ಬರುತ್ತಿದೆ, ದಿವ್ಯವಾದ ಮಳೆ....ಮಧ್ಯಾಹ್ನ MES ಇಂಟರ್ನಲ್ಸ್ ಇದೆ, ಆದರೆ ಓದಲು ಮನಸಿಲ್ಲ.. ಓ ಮೇಘರಾಜನೆ ಏಕೆ ಹೀಗೆ ಕಾಡುತ್ತಿರುವೆ, ಪ್ಲೀಸ್ ವಾಪಸ್ ಹೋಗು...
                                      ನಿಸರ್ಗವೇ ನಿನ್ನ ಮುಂದೆ ಸೋಲದಿರುವರು ಯಾರು?? ಈ  ಸೋನೆ ಮಳೆ, ನಿಶ್ಯಬ್ದ , ತಂಪು ವಾತಾವರಣ, ಹಾಸ್ಟೆಲ್ಲಿನ ಸುತ್ತ ಹಸಿರಸಿರು ಮರಗಳು, ಪಕ್ಕದಲ್ಲೇ ಚಳಿಗೆ ಹೆದರಿಕೊಂಡು ಬೆಚ್ಚಗೆ ಮಲಗಿರುವ railway track , ಓಹ್..!!! ಸಾವಿರಾರು ಭಾವನೆಗಳು ಕಾರಂಜಿಯಂತೆ ಪುಟಿಯುತ್ತಿವೆ..ಕೇವಲ ಇಂದಷ್ಟೇ ಅಲ್ಲ, ಯಾವಾಗಲು ಹೀಗೆ, ಮಳೆ ಬಂದರೆ ಮನಸ್ಸಿನ ಭಾರ ಕಡಿಮೆ ಆಗಿ, ಮುದ ನೀಡುತ್ತದೆ...ಹೇಗೆ ಮಳೆ ನೀರು ಭೂಮಿಯನ್ನು ಸೇರಿ ಒಂದಾಗುತ್ತದೋ ಹಾಗೇ ನನ್ನ ಭಾವನೆಗಳು ಅದೂ ಸಾಗರದಷ್ಟು ...........ದಲ್ಲಿ ಒಂದಾಗುತ್ತವೆ 
                                      ಆದರೂ ಹುಡುಗ ಕೇಳು, ಮಳೆ ಬಂದರೆ ನೀನೇ ಮೊದಲು ನೆನಪಾಗುವುದು  ಅಥವಾ ನಾನೇ ನಿನ್ನ ನೆನಪು ಮಾಡಿಕೊಳ್ಳುತ್ತೇನೆ..ಯಾಕೋ ಗೊತ್ತಿಲ್ಲ ನೀನೂ ಕೂಡ ಆ ಮೆಘರಾಜನಂತೆಯೇ ಕಾಡುತ್ತಿಯ... ನಾನು ನಿನ್ನ ಜೊತೆ ಮಾತಾಡುತ್ತೇನೆ,ಆದರೆ ನಿನಗದು ಕೇಳಿಸುವುದಿಲ್ಲ,ನನ್ನ ಮಾತು ಆ ಮೇಘನಿಗೆ ಇಷ್ಟ ,ನಮ್ಮಿಬ್ಬರ ಕ್ಷಿತಿಜ ಒಂದೇ..
                                      ಬಾ  ಹುಡುಗ ಸೋನೆ ಮಳೆಯಲ್ಲಿ, ಕೈ ಕೈ ಹಿಡಿದು ಈ ಹಸಿರು ಹುಲ್ಲಿನ ಮೇಲೆ ನಡೆಯೋಣ, ನೋಡು ವರ್ಷಧಾರೆ ಸ್ನಾನ ಮಾಡಿಸುತ್ತಿದೆ, ನನ್ನನ್ನಲ್ಲ....!!!ನಿನ್ನನ್ನಲ್ಲ ...!!! ನಮ್ಮಿಬ್ಬರ ಮಧ್ಯ ನಡೆಯದಿರುವ ಅಸಂಖ್ಯಾತ  ಸಂಭಾಷಣೆಗಳನ್ನ, ಘಟನೆಗಳನ್ನ, ಮೌನದಲ್ಲಿ ಕರಗಿ ಹೋಗುವ ಭಾವನೆಗಳನ್ನ......:):)
ಹುಡುಗಾ......
ಇಲ್ಲಿ ಕೇಳು,ಇಂದು ಮಾತ್ರ ಏಕೋ ನಿನ್ನ ನೆನಪು ಅಸ್ಪಷ್ಟವಾಗುತ್ತಿದೆ, ಆ ಸುರಿಯುವ ಮೇಘನೆ ಬಹಳ ಇಷ್ಟವಾಗುತ್ತಿದ್ದಾನೆ..ಒಂದು ಹಾಡು ನೆನಪಿಗೆ ಬರುತ್ತಿದೆ...

                         ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
                         ಪಾರಿಜಾತದ ಹೂವು ಸುರಿಸಿದಂತೆ,
                         ಮುಟ್ಟಿದರೆ ಮಾಸುತಿಹ  ಮಂಜುಹನಿ ಮುತ್ತಿನಲಿ
                         ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ.....$$$$

                        ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ 
                        ಹೆಣ್ಣ ಕಣ್ಣಂಚಿನಲಿ ತುಳುಕುವಂತೆ 
                        ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು 
                        ಮರವನಪ್ಪಿದ ಬಳ್ಳಿ ಬಳುಕುವಂತೆ...$$$$



ಇಲ್ಲಿ ಯಾರಿಗೂ ಇಂದು ಓದುವ mood ಇಲ್ಲ,ಎಲ್ಲರು ಯಾರ್ಯಾರದೋ ನೆನಪಿನ ನಶೆಯಲ್ಲಿ ತೇಲುತ್ತಿದ್ದಾರೆ,ವಿರಹ ವೇದನೆಯಿಂದ ಕೊರಗುತಿದ್ದಾರೆ...ಆದರೆ ನಾನು ಮಾತ್ರ ದಿಫ್ಫೆರೆಂತ್, ಯಾಕೆಂದರೆ ನೀ ಯಾವಾಗಲೂ ನನ್ನ ಹತ್ತಿರವೇ ಇರುವೆ ಹಾಗೂ ನಿನ್ನ ಬಗ್ಗೆ ಮಾತಾಡಿಕೊಳ್ಳಲು ಮೆಘರಾಜನಂತಹ ಒಬ್ಬ ಒಳ್ಳೆ ಗೆಳೆಯನಿದ್ದಾನೆ....ಈ ಭೂಮಿತಾಯಿ,ಹಸಿರು ಹುಲ್ಲು,ಮರಗಿಡ,ಪಕ್ಷಿಗಳು,ಹಾಸ್ಟೆಲ್ಲಿನ ನಾಯಿ,ಬೆಕ್ಕುಗಳು ,ಮಾಳಿಗೆಯ ಮೇಲಿನ ಕಾಗೆಗಳು,ನಿಮಿಷಕ್ಕೊಮ್ಮೆ ಎಳೆಗಳ ಪಕ್ಕದಿಂದ ಸುಲಿಯುವ ತಂಗಾಳಿ ,ಚಳಿಇಂದ ತೆಪ್ಪಗೆ ಮಲಗಿರುವ ರೈಲ್ವೆ ಹಳಿ  &ಅದರಲ್ಲಿನ ಜಲ್ಲಿ ಕಲ್ಲುಗಳು,ನನ್ನ ರೂಂ,ನನ್ನ ಬೆಡ್,ನನ್ನ ದಿಂಬು  ಅಂಡ್ very imp ನನ್ನ MES TEXT BOOK  ಕೂಡ ನನ್ನ ನಿನ್ನ ಮಾತುಗಳನ್ನು ಕದ್ದು ಕೇಳುತ್ತಿವೆ.. ನನಗೆ ಇನ್ನು ಏನೇನೋ ಮಾತಾಡಬೇಕಿದೆ,ಆದರೆ ಟೈಮ್ ಇಲ್ಲ.

                   ಮತ್ತೆ ಒಂದು ಸೋನೆಮಳೆ,ಒಂದು cold ಡೇ, ಒಂದು romantic mood ಹಾಗೂ ಮತ್ತೊಂದು ಪ್ರೀತಿಯ ಮಹಾಸ್ಪರ್ಶದೊಂದಿಗೆ ಭೇಟಿಯಾಗೋಣ...ಅಲ್ಲಿವರೆಗೆ ಬೈ ಬೈ....take care ..:):)


                       

Monday 24 October 2011

gulmohar's bad time

ಹೀಗೊಂದು ಕವನ ಇನ್ 12th std ...
             ಕುಳಿತಲ್ಲೇ ಹೋಗಿಬಿದಬಲ್ಲೆ ನಾನು switzerland  ಅಮೆರಿಕಗಳಿಗೆ 
             ಆಗಿಬಿದಬಲ್ಲೆ ಡಾಕ್ಟರ್, ಐಎಸ್ ಆಫಿಸರ್  ಇಲ್ಲವೇ  pwd ಇಂಜಿನಿಯರ್ 
             ಯಾ ಸೂಪರ್ ಮಾಡೆಲ್ ...
             ಹಾಗಿರುತ್ತವೆ ನನ್ನ ಕನಸುಗಳು 
             ಕಲ್ಪನಾ ಲೋಕದ ಕೂಸುಗಳು 
             ಆದರೆ ಎಂದಿಗೂ ಆಗುವುದಿಲ್ಲ ಇವೆಲ್ಲ ನನಸು 
             ಏಕೆಂದರೆ ಹಾಗಿದೆ ಯಾವಾಗಲು ಕಲ್ಪನಾ ಲೋಕದಲ್ಲಿ 
             ವಿಹರಿಸುವ ನನ್ನ ಮನಸು ....

             ಈಗೀಗ ನನ್ನ ಮನೆಯ ಗೋಡೆಗಳು 
             ಕೇಕೆ ಹಾಕಿ ನಗುತ್ತ ಹೇಳುತ್ತಿವೆ ಗುಟ್ಟೊಂದು 
             ಏ ಹುಡುಗಿ..!!!  ಆಗಬೇಡ ನೀ ಕನಸಿನ ರಾಜಕುಮಾರಿ 
             ಕುಲಿತಿರಬೇಡ ನೀ ಕನಸಿನರಮನೆಯಲ್ಲಿ 
             ಅವೆಲ್ಲವನ್ನು ಒದ್ದೆದ್ದು ಬಾ ನೀ ವಾಸ್ತವಕ್ಕೆ 
             ಆಗಲೇ ನಿನ್ನ ಜೀವನ ಉದ್ಧಾರ 
              ಬದುಕಿಗೊಂದು ಆಧಾರ ...

              ಬೆಚ್ಚಿಬಿದ್ದು ಹ್ಞೂ ಗುಟ್ಟುತ್ತದೆ ನನ್ನ ಮನಸು 
              ಮತ್ತು ಗೋಡೆಗಳಿಗೆ  ಹೇಳುತ್ತೇನೆ 
              ಏ ಹುಚ್ಚಪ್ಪಗಳಿರ , ಊರು ಕೊಳ್ಳೆಹೊಡೆದ ಮೇಲೆ 
              ಬಾಗಿಲು ಹಾಕಿ ಏನು ಪ್ರಯೋಜನ 
              ೧೦ ವರ್ಷದ ಹಿಂದೆ ಹೇಳಬಾರದಿತ್ತೆ ಏ ಗುಟ್ಟು 
              ಏಕೆಂದರೆ ನನಗೀಗ ವಯಸ್ಸು ಹದಿನೆಂಟು 

              ಮತ್ತೆ ಗೋಡೆಗಳು, ಅದರ ಮೇಲಿನ ಹುಳ ಹುಪ್ಪಡಿಗಳು
              ಕರುಣೆಯಿಂದ ಹೇಳುತ್ತವೆ 
              " ಆದರು ನೀ ಬಿಡಬೇಕು ಈ ಕನಸು ಕಾಣುವ ಚಾಳಿ
              ನಿಲ್ಲಿಸು ಈ ಕಲ್ಪನಾ ಲೋಕದ ವಿಹಾರ 
               ಇಲ್ಲದಿದ್ದರೆ ನಿನ್ನ ಭವಿಷ್ಯ ಹರೋಹರ...!!"

              ಗೆಳೆಯರೇ  ಈ ಕವನ ಓದಿದ ಮೇಲೆ ನಿಮಗನ್ನಿಸಬಹುದು ಏನಿದು negative thought ಅಂತ .... ಹೌದು puc  ಯ cetಯಲ್ಲಿ ಕೆಟ್ಟ rank ಬಂದಾಗ ತುಂಬಾ ದುಖದಿಂದ ಬರೆದ ಕವನ ಇದು.. ಜೀವನ ಮುಗಿದೇ ಹೋಯಿತು ಎಂಬ ಭಯ, ಆತಂಕಗಳು, ಅವಮಾನಗಳು... 
ಹಾ ಹಾ ಹಾ ಹಾ  ಆದರೆ ಈಗ ನಗು ಉಕ್ಕಿ ಬರುತ್ತದೆ, ಜೀವನ ಸ್ವಾರಸ್ಯದ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ನಡುಗುತ್ತಿದ್ದ ನನ್ನ ಮನಸು ಕಂಡು...
ಆದರೆ ಗುಲ್ ಮೊಹರ್  ಈಗ ನಗುವುದನ್ನು ಕಲಿತಿದ್ದಾಳೆ.........:):)

Sunday 23 October 2011

Starting up..:):)

Hi buddies.... finally am here on blogger.. my mind keeps racing all the time recklessly n i feel difficulty to figure out n diffrentiate the things, so i always preferred to pendown the things in my dairy....sometimes bad writer n sometimes by mistakely  very good thots came out frm this confused mind(rated by my honest critic friends n my parents:):)).....so dad always told y don't u publish this stuff on ur blog, do something, write something, give work to ur brain,explore ur subconcious etc etc.. but me lazy bug never considered his thought of blogging(cos  frankly speaking i hate to sit infront of system n keep typing)... Today am nuts to statr up my blog, decided to give MUKTI to all my dairy thots n to let them travel frm my old boring dairy towards colorfull blog....So friends here we go, pls do bare me... meet u all in next post.. bye bye..take care.. WISH U ALL HAPPY DEEPAVALI..:):)