Saturday 16 November 2013

ಹಸಿವು


   ಹಸಿವು 


ಎಂಥ ಕಸುವೋ ಅಣ್ಣಾ 
ಈ ಹಸಿವಿಗೆ……
ಮನುಕುಲವ ಹಾಳುಗೆಡಿಸುತ್ತಿರುವ 
ಕಲಿಯುಗದ ಈ ಹಸಿವಿಗೆ
ಎಂಥ ಕಸುವೋ ಅಣ್ಣಾ ….


ಹಿಂದೊಮ್ಮೆ ಬುಧ್ದನೊಬ್ಬ ಅರ್ದರಾತ್ರಿ ಎದ್ದು ನಡೆದಿದ್ದ
ಮುಕ್ತಿಯ ಹಸಿವೆಗೆ…
ಮತ್ತೊಬ್ಬ ಕಂದ, ಬಸವ ಪರಿವಾರ ಬಿಟ್ಟು ನಡೆದಿದ್ದ
ಲೋಕಕಲ್ಯಾಣದ ಹಸಿವೆಗೆ..
ಅಂದೊಬ್ಬ ವಿವೇಕಾನಂದ ಧೀಮಂತನಾಗಿ ಎದ್ದು ನಿಂತಿದ್ದ
ಜ್ನಾನದ ಹಸಿವೆಗೆ…
ಅಕ್ಕ ಒಬ್ಬಳು ಸರ್ವಸಂಗ ಪರಿತ್ಯಾಗಿಯಾದಳು
ಭಕ್ತಿ ಪರಾಕಾಷ್ಟೆಯ ಹಸಿವೆಗೆ…
ಅಲ್ಲೊಬ್ಬ ಸಂಗೊಳ್ಲಿ ರಾಯ ಜೀವ ತೆತ್ತಿದ್ದ
ದೇಶಪ್ರೇಮದ ಹಸಿವೆಗೆ…


ಆದರೆ ಈ ಕಲಿಯುಗದ ಹಸಿವೆ ಎಂಥದೊ ಅಣ್ನಾ..
ಪ್ರಳಯದ ಕೊಸರಿನಂತೆ ಈ ಹಸಿವು..
ಹೆಬ್ಬಾವಿನ ಬುಸುಗುಡುವಿಕೆಯಂತೆ ಈ ಹಸಿವು..
ಭೂ ಗರ್ಭದ ಲಾವಾರಸದಂತೆ ಈ ಹಸಿವು..!!!
ಇಲ್ಲೊಬ್ಬನಿಗೆ ತೀರದ ಅಧಿಕಾರದ ಹಸಿವು..
ಹಗರಣಗಳ ಕೊಚ್ಚೆಯಲ್ಲಿ ಬಿದ್ದು ನರಳುತ್ತಿದ್ದರೂ
ದೇಶವನ್ನಾಳುವ ಹಸಿವು..
ಜಾತೀಯತೆಯ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಹಸಿವು..
ಮತ್ತೊಬ್ಬನಿಗೆ ಭೂತಾಯಿಯ ಎದೆಬಗೆದು
ಮಣ್ನು ಮಾರಿದರೂ ತೀರದ ಹಣದ ಹಸಿವು..
ಇನ್ನೊಬ್ಬನಿಗೆ, ಕಾವಿ ತೊಟ್ಟು ಪ್ರವಚನ ಪಠಿಸಿದರೂ
ಹಾಗೇ ಉಳಿದಿರುವ ದೇಹದ ಹಸಿವು…!!!!


ಎಂಥ ಕಸುವೋ ಅಣ್ನಾ ಕಲಿಯುಗದ ಈ ಹಸಿವಿಗೆ..??
ಕಾದುನೋಡೋಣ, ಏನಾದರೂ ಮಾಡೋಣ,
ಕುಸಿಯುತ್ತಿರುವ ಮ್ಉಲ್ಯಗಳ ಮತ್ತೆ ಎತ್ತಿಹಿಡಿದು
ದಿವ್ಯಪಥದತ್ತ ನಡೆಸುವ಻ ಹಸಿವಿಗೆ….

4 comments:

  1. ಮನುಷ್ಯನಲ್ಲಿರುವ ತಾಕತ್ತು ಅಸೀಮವಾದುದು,ಅದನ್ನು ಬಳಸುವ ಹಾದಿ ಸರಿ ಇರಬೇಕಷ್ಟೇ ಅಲ್ವಾ ಮೇಡಮ್?
    ಬರೆದ ರೀತಿ ಬಹಳ ಇಷ್ಟವಾಯ್ತು...ಮೊದಲಾರ್ಧದಲ್ಲಿ ಮಾದರಿ ವ್ಯಕ್ತಿತ್ವಗಳನ್ನಿಟ್ಟುಕೊಂಡು ಅವುಗಳನ್ನು ನಡುವಿನ ಸಾಲುಗಳಲ್ಲಿ ಪ್ರಸ್ತುತ ಸನ್ನಿವೇಶದೊಡನೆ ಹೋಲಿಸಿ ,ಇಂದಿನ ಸ್ಥಿತಿಯ ಬಗ್ಗೆ ,ಮಾನವ ಶಕ್ತಿ ದಿಕ್ಕುತಪ್ಪುತ್ತಿರುವ ಬಗ್ಗೆ ವಿಷಾದಿಸುವ ಪರಿ ,ಕೊನೆಯಲ್ಲಿ ಮತ್ತೆ ಒಂದು ಆಶಾಕಿರಣ,ಒಂದಿನಿತು ಕಿವಿಮಾತುಗಳೊಂದಿಗೆ ಮುಗಿಸಿರುವುದು ಬಹಳ ಹಿಡಿಸಿತು ಮೇಡಮ್...
    ಏನೋ ಒಂದಿಷ್ಟು ಕಲಿತೆ...
    ವಂದನೆಗಳು...
    ನಮಸ್ತೆ :)

    ReplyDelete
  2. Tumba dhanyavaadagalu Chinmay.. for ur time and review...:)

    ReplyDelete
  3. ವೀಣಾ ಚನ್ನಾಗಿದೆ ಕವನ

    Ty. ped with Panini Keypadವೀಣಾ

    ReplyDelete
  4. ನಿಜವಾದ ಹಸಿವಿನ ಒಳಾರ್ಥ ಎಳೆ ಎಳೆ ಯಾಗಿ ಹರಿದು ಬಂದಿದೆ. ಚೆನ್ನಾಗಿ ಮೂಡಿ ಬಂದಿದೆ. ಶುಭವಾಗಲಿ

    ReplyDelete