Monday 3 March 2014

            ಕಣ್ಣಿನಾಟ 


ನಾನೀಗ ಏನೋ ಹೇಳಬೇಕಿದೆ ತುಂಬ ದೀರ್ಘವಾದ ವಿಚಾರ  
ಇತ್ತ ನೋಡು ನನ್ನನ್ನೇ, 
ಗಮನವಿಟ್ಟು ಕೇಳು...  

ಇಷ್ಟೆಲ್ಲಾ ಇದೆ ಜಂಜಡ, ಬೇಗ ನಿರುಮ್ಮಳಾಗುವ ಅವಸರ..   
 ಅರ್ಥವಾಯಿತೇ..? 
ಪರಿಹಾರವೇನು,  ಹೇಳೇ ಬಿಡು.. 

ಅರೇ..??   ಅದೇನು ಹೇಳಿದೆ ನೀ..?? 
ಕಣ್ಣ ಕಾಡಿಗೆ ಮಂಕುಬೂದಿ ಎರಚಿತು ನೋಡು  
ತಲೆಯೆಲ್ಲ ಸುತ್ತು, ಬುದ್ಧಿ ವಶೀಕರಣ 
ಆಡುವ ಪ್ರತೀ ಅಕ್ಷರಕ್ಕೂ, ಕಣ್ಸನ್ನೆಯ ವ್ಯಾಕರಣ... 
 ಒಮ್ಮೆ ಕಿರಿದು, ಆಶ್ಚರ್ಯಕ್ಕೆ ಊರಗಲ ಮರುಕ್ಷಣ..!!   
ಕಳವಳ, ತಳಮಳಗಳೆಲ್ಲವೂ, ರೆಪ್ಪೆಗಳ ಪಟಪಟದೊಂದಿಗೆ ಅನಾವರಣ..
 ಅದ್ಭುತ ಯಕ್ಷಗಾನ...!!  
ಕಳೆದೇ ಹೋಗಿದ್ದೆ ನಿನ್ನ ಕಣ್ಣಿನಾಟದಲ್ಲಿ, ಕಿವಿಗೇನೂ ಬೀಳಲಿಲ್ಲ..   
ಮತ್ತೊಮ್ಮೆ ಹೇಳು ಆ ನಿನ್ನ ದೀರ್ಘ ವಿಚಾರ  
ಈಗ ಕೇಳಿಸಿಕೊಳ್ಳುವೆ ಸರಿಯಾಗಿ
 ಬೇರೆತ್ತಲೋ ನೋಡುತ್ತ...!! 

2 comments:

  1. ಹೊಗಳಿಸಿಕೊಳ್ಳಲು ಹೆಣ್ಣುಮಕ್ಕಳು ತುಂಬ ಇಷ್ಟಪಡುತ್ತಾರೆ ಅಲ್ಲವೇ ವೀಣಮ್ಮ?
    ಸಲೀಸಾದ ಭಾವ ಯಾನ.

    ReplyDelete
  2. ಹ್ಹ ಹ್ಹ ಹೌದು ಕೆಲವೊಮ್ಮೆ ಸುಂದರ ನಯನಗಳ ಸುಳಿಯಲ್ಲಿ ಕಳೆದುಹೋಗೋ ಹಾಗಾಗುತ್ತದೆ... ಆಕರ್ಷಣೆ ಹೆಚ್ಚಾದರೆ ಹಿನ್ನೆಲೆ ಸಂಗೀತ ಕೂಡ ಶುರುವಾಗಿ ಅವಳ ಮಾತುಗಳೂ ಕೇಳದು... ಮೊದಲೆರಡು ಪಂಕ್ತಿ ಓದಿದಾಗ ಏನೂ ತಿಳಿಯಲಿಲ್ಲ ನಂತರ ತಿಳಿಯಿತು ವಿಷಯ ಏನೆಂದು...nice...

    ReplyDelete