Thursday 12 February 2015

ಮುತ್ತು
ಮುತ್ತಿಟ್ಟುಕೊಳ್ಳುತ್ತಿದ್ದೆವು ನಾವು
ಎದೆಯ ಅಹಂಕಾರವ ದಹಿಸುತ್ತ ಚೂರು ಚೂರು,
ಹೀರಿದೆವು ಗುಟುಕು ಗುಟುಕಾಗಿ ತಲೆಯೇರಿದ ಮದವ,
ಎಳೆದವು ಗಂಟಲಲ್ಲೇ ಬಿದ್ದು ಸಾಯುತ್ತಿದ್ದ ಮಾತುಗಳ
ನಾಲಿಗೆಯ ಮೇಲೆ, ಸೀದಾ ಪರಸ್ಪರರ ಆತ್ಮಗಳಿಗೆ ನಾಟುವಂತೆ..

ಅರೆ ನಿಮೀಲಿತ ಕಣ್ಣುಗಳು, ಧ್ಯಾನದ ಪ್ರಣತಿ
ತಡವರಿಸುತ್ತಿದ್ದ ಬೆರಳು, ಯೋಗಮುದ್ರೆ
ಉಸಿರಿನ ಏರಿಳಿತ, ಶ್ರುತಿಗೆ ಪಕ್ಕಾದ ಮಂದ್ರಸ್ವರ
ಮುಕ್ತ, ಅವ್ಯಕ್ತ ಭಾವ..
ಎಲ್ಲ ಹೇಳಿಕೊಂಡುಬಿಟ್ಟೆವು ನಾವು
ಮುತ್ತಿಟ್ಟುಕೊಳ್ಳುತ್ತಿದ್ದೆವು ನಾವು...



1 comment:

  1. ಅದೊಂದು ದೈವಿಕ ಅನುಭವ.
    ಮುತ್ತೆಂಬುದು ಮಂತನದ ಅಮೃತಕಿಂತಲೂ ಅಮಿತ ರುಚಿ.
    ಈಗಾಗಲೇ ಅದೃಷ್ಟವಂತ ಚಂದಾದಾರರಿಗೂ,
    ಮತ್ತು ವಂಚಿತರಿಗೆಲ್ಲರಿಗೂ ಮುತ್ತುಗಳ ಏ.ಟಿ.ಎಂ 24/7 ಚಾಲನೆಯಲಿರಲಿ.

    ReplyDelete