Sunday 9 February 2014



ಓದು                                                      

ನಿನ್ನನ್ನೊಮ್ಮೆ ಓದಬೇಕಿದೆ,
ತೀವ್ರವಾಗಿ, ಮುನ್ನುಡಿಯಿಂದ ಕೊನೆಪುಟದವರೆಗೆ... 
ನಾನಂತೂ ಎಂದಿಗೂ ತೆರೆದ ಪುಸ್ತಕ...  
ಪ್ರತೀ ಅಧ್ಯಾಯವೂ ಸ್ವಚ್ಚಂದ, ಸರಳ 
ತೀರ ನಿನ್ನೆದೆಗೆ ನಾಟಿಬಿಡಬಹುದು...  
ಎಲ್ಲ ಸಾಲಲ್ಲೂ ಅಪ್ಪಟ 'ನಾನು' 
ನಿನ್ನ ನೆಚ್ಚಿನ ಪುಸ್ತಕದ ಪಟ್ಟಿಗೆ ಸೇರಿಯೂಬಿಡಬಹುದು... 
ಒಮ್ಮೆ ಅನುವು ಮಾಡಿಕೊಂಡು ಓದಿಯೇ ಬಿಡು 
ಹಾಗೇ ನಿನ್ನನೊಮ್ಮೆ ಓದುವ ಅವಕಾಶವನ್ನೂ ನೀಡಿಬಿಡು.. 






ಜರೂರಿ 


ಪ್ರೀತಿಯಂಗಡಿಯಲ್ಲಿ 
ಹೃದಯ ಗಿರವಿ ಇಟ್ಟಾಗಿದೆ.. 
ನನಗೀಗ ಅದ ಹಿಂಪಡೆಯುವ ಜರೂರಿ
ಅರ್ಧ ಸೇರು ಕಣ್ಣೀರು, ಒಂದು ಮಣ  ನಿಟ್ಟುಸಿರು, ರಾಶಿ ನೆನಪುಗಳು
ಸದ್ಯಕ್ಕಿರುವುದು ಇಷ್ಟೇ, ಒಪ್ಪಿಸಿಕೋ 
ಬಾ ವ್ಯವಹಾರ ಚುಕ್ತಾ ಮಾಡಿಬಿಡೋಣ, ಏಕೆಂದರೆ 
ನನಗೀಗ ಹೃದಯ ಹಿಂಪಡೆಯುವ ಜರೂರಿ...








4 comments:

  1. ಓದು ಮತ್ತು ಜರೂರಿ ಎರಡೂ ಕವನಗಳ ಭಾವ ತೀವ್ರತೆ ಮನಸ್ಸಿಗೆ ನಾಟುವಂತಿದೆ.

    ReplyDelete
    Replies
    1. ಒಬ್ಬರನ್ನೊಬ್ಬರು ಓದಿಕೊಳ್ಳಲು ಸಮಯದ ಅಭಾವ ಈ ಜಂಜಾಟದ ಬೆಂಗಳೂರಲ್ಲಿ.. ಅದಕ್ಕೆ ಈ ಪುಟ್ಟ ಕವಿತೆಯೊಂದಿಗೆ ಅರಿಕೆ...

      Delete
  2. "ಓದು" ಕವನದಲ್ಲಿಯ ಸರಳತೆ ಹಾಗು ಸೃಜನಶೀಲತೆ ಇಷ್ಟವಾಯ್ತು.. ಜ಼ರೂರಿ ಕವನ ಓದಿದಾಗ ಹೃದಯ ಭಾರವಾದ ಅನುಭವ "ಅರ್ಧ ಸೇರು ಕಣ್ಣೀರು, ಒಂದು ಮಣ ನಿಟ್ಟುಸಿರು, ರಾಶಿ ನೆನಪುಗಳು" ಕೊಟ್ಟು ಲೆಕ್ಕ ಚುಕ್ತ ಮಾಡುವ ಸನ್ನಿವೇಶ ಮನಸಿಗೆ ನಾಟುತ್ತದೆ. ಒಟ್ಟಾರೆ ಎರಡು ಸುಂದರ ಕವನಗಳೂ ಇಷ್ಟ ಆಯ್ತು.

    ReplyDelete
    Replies
    1. ಧನ್ಯವಾದಗಳು ಸರ್.. ಓದಿದ್ದಕ್ಕೆ ಮತ್ತು ಬರೆದಿದ್ದಕ್ಕೆ... :)

      Delete