Monday 3 February 2014

                             ಗುಲ್ ಮೊಹರ್ ಳ ಸ್ವಗತ 

ಹೇ ಗುಲ್ ಮೊಹರ್ 
ನಿನ್ನಗುಲ್ ಮೊಹರ್  ಗಿಡದಿಂದ
ಕೆಲ ಹೂಗಳನ್ನ ಕಿತ್ತು ತಾ
ಕೆಂಪು  ಮತ್ತು ಬಿಳಿ ಮಿಶ್ರಿತ ಬಣ್ಣ                                                         

ನನ್ನ ಶವಪೆಟ್ಟಿಗೆಯನ್ನು ಸಿಂಗರಿಸು 

ಸಂಜೆ ಸರಿಯುವ ಸೂರ್ಯನಂತೆ ಆತ್ಮ  ...

 

ಇಕೋ ಇಲ್ಲಿವೆ ನನ್ನ ಗುಲ್ ಮೊಹರ್                                                  
 ಗಿಡದ ಕೆಂಪು ಬಿಳಿ  ಹೂಗಳು,             
ಅವುಗಳೊಡನೆ,  ನಿನ್ನೊಡನೆನಾನೂ ಬರುವೆ 
ಸ್ವರ್ಗವೋನರಕವೋಯಾವುದಾದರೂ ಸರಿ
ಅಲ್ಲಿ ಮತ್ತೆ ಉದಯಿಸೋಣ
ಚುಮು ಚುಮು ಮುಂಜಾವಿನ ರವಿಯಂತೆ.....

 

                                                                                                                        


2 comments:

  1. ಗೆಳತಿ ಈ ಗುಲ್ಮೊಹರವು ನನ್ನ ಯವ್ವನದಲ್ಲಿ ಗಾಢವಾದ ಛಾಪೊತ್ತಿದೆ. ಅಲ್ಲೊಂದು ಕ್ರೆಸೆಂಟ್ ಪಾರ್ಕು ಮತ್ತು ಆ ಕಲ್ಲು ಬೆಂಚು ನನ್ನ ಮೆದುಳಲ್ಲಿ ಸ್ತಬ್ಧವಾದಂತೆ ಚಿತ್ರವಾಗಿ ನಿಂತಿವೆ.

    ReplyDelete
    Replies
    1. ಈ ಗುಲ್ಮೊಹರ್ ಳ ಸೌಂದರ್ಯವೇ ಅಂಥದ್ದು ಬದರಿ ಅಂಕಲ್.. ನನ್ನ ಬರವಣಿಗೆಗೂ ಸ್ಪೂರ್ಥಿ ಇವಳೇ.. ಹೇಳಿಕೊಳ್ಳಲು, ಬರೆದುಕೊಳ್ಳಲು ತುಂಬಾ ಇದೆ ಈ ಗುಲ್ಮೊಹರ್ ಳೊಂದಿಗೆ ತಳುಕು ಹಾಕಿಕೊಂಡಿರುವ ಕಥೆಗಳು... Everybody has a got a story to tell, ಇದಕ್ಕೆ ನೀವು ಹೊರತಲ್ಲ ಅನ್ಸುತ್ತೆ, ಹೇಳಿಬಿಡಿ ನಿಮ್ಮ ಆ ಕಥೆಯನ್ನ.. ಕ್ರೆಸಂಟ್ ಪಾರ್ಕ್, ಕಲ್ಲು ಬೆಂಚು ಮತ್ತು ಗುಲ್ ಮೊಹರ್.. ಆಮೇಲೆ ....??

      Delete