ಹೊರಗಡೆ ಮಳೆ ಬರುತ್ತಿದೆ, ದಿವ್ಯವಾದ ಮಳೆ....ಮಧ್ಯಾಹ್ನ MES ಇಂಟರ್ನಲ್ಸ್ ಇದೆ, ಆದರೆ ಓದಲು ಮನಸಿಲ್ಲ.. ಓ ಮೇಘರಾಜನೆ ಏಕೆ ಹೀಗೆ ಕಾಡುತ್ತಿರುವೆ, ಪ್ಲೀಸ್ ವಾಪಸ್ ಹೋಗು...
ನಿಸರ್ಗವೇ ನಿನ್ನ ಮುಂದೆ ಸೋಲದಿರುವರು ಯಾರು?? ಈ ಸೋನೆ ಮಳೆ, ನಿಶ್ಯಬ್ದ , ತಂಪು ವಾತಾವರಣ, ಹಾಸ್ಟೆಲ್ಲಿನ ಸುತ್ತ ಹಸಿರಸಿರು ಮರಗಳು, ಪಕ್ಕದಲ್ಲೇ ಚಳಿಗೆ ಹೆದರಿಕೊಂಡು ಬೆಚ್ಚಗೆ ಮಲಗಿರುವ railway track , ಓಹ್..!!! ಸಾವಿರಾರು ಭಾವನೆಗಳು ಕಾರಂಜಿಯಂತೆ ಪುಟಿಯುತ್ತಿವೆ..ಕೇವಲ ಇಂದಷ್ಟೇ ಅಲ್ಲ, ಯಾವಾಗಲು ಹೀಗೆ, ಮಳೆ ಬಂದರೆ ಮನಸ್ಸಿನ ಭಾರ ಕಡಿಮೆ ಆಗಿ, ಮುದ ನೀಡುತ್ತದೆ...ಹೇಗೆ ಮಳೆ ನೀರು ಭೂಮಿಯನ್ನು ಸೇರಿ ಒಂದಾಗುತ್ತದೋ ಹಾಗೇ ನನ್ನ ಭಾವನೆಗಳು ಅದೂ ಸಾಗರದಷ್ಟು ...........ದಲ್ಲಿ ಒಂದಾಗುತ್ತವೆ
ಆದರೂ ಹುಡುಗ ಕೇಳು, ಮಳೆ ಬಂದರೆ ನೀನೇ ಮೊದಲು ನೆನಪಾಗುವುದು ಅಥವಾ ನಾನೇ ನಿನ್ನ ನೆನಪು ಮಾಡಿಕೊಳ್ಳುತ್ತೇನೆ..ಯಾಕೋ ಗೊತ್ತಿಲ್ಲ ನೀನೂ ಕೂಡ ಆ ಮೆಘರಾಜನಂತೆಯೇ ಕಾಡುತ್ತಿಯ... ನಾನು ನಿನ್ನ ಜೊತೆ ಮಾತಾಡುತ್ತೇನೆ,ಆದರೆ ನಿನಗದು ಕೇಳಿಸುವುದಿಲ್ಲ,ನನ್ನ ಮಾತು ಆ ಮೇಘನಿಗೆ ಇಷ್ಟ ,ನಮ್ಮಿಬ್ಬರ ಕ್ಷಿತಿಜ ಒಂದೇ..
ಬಾ ಹುಡುಗ ಸೋನೆ ಮಳೆಯಲ್ಲಿ, ಕೈ ಕೈ ಹಿಡಿದು ಈ ಹಸಿರು ಹುಲ್ಲಿನ ಮೇಲೆ ನಡೆಯೋಣ, ನೋಡು ವರ್ಷಧಾರೆ ಸ್ನಾನ ಮಾಡಿಸುತ್ತಿದೆ, ನನ್ನನ್ನಲ್ಲ....!!!ನಿನ್ನನ್ನಲ್ಲ ...!!! ನಮ್ಮಿಬ್ಬರ ಮಧ್ಯ ನಡೆಯದಿರುವ ಅಸಂಖ್ಯಾತ ಸಂಭಾಷಣೆಗಳನ್ನ, ಘಟನೆಗಳನ್ನ, ಮೌನದಲ್ಲಿ ಕರಗಿ ಹೋಗುವ ಭಾವನೆಗಳನ್ನ......:):)
ಹುಡುಗಾ......
ಇಲ್ಲಿ ಕೇಳು,ಇಂದು ಮಾತ್ರ ಏಕೋ ನಿನ್ನ ನೆನಪು ಅಸ್ಪಷ್ಟವಾಗುತ್ತಿದೆ, ಆ ಸುರಿಯುವ ಮೇಘನೆ ಬಹಳ ಇಷ್ಟವಾಗುತ್ತಿದ್ದಾನೆ..ಒಂದು ಹಾಡು ನೆನಪಿಗೆ ಬರುತ್ತಿದೆ...
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತದ ಹೂವು ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ
ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು
ಮರವನಪ್ಪಿದ ಬಳ್ಳಿ ಬಳುಕುವಂತೆ...$$$$
ಇಲ್ಲಿ ಯಾರಿಗೂ ಇಂದು ಓದುವ mood ಇಲ್ಲ,ಎಲ್ಲರು ಯಾರ್ಯಾರದೋ ನೆನಪಿನ ನಶೆಯಲ್ಲಿ ತೇಲುತ್ತಿದ್ದಾರೆ,ವಿರಹ ವೇದನೆಯಿಂದ ಕೊರಗುತಿದ್ದಾರೆ...ಆದರೆ ನಾನು ಮಾತ್ರ ದಿಫ್ಫೆರೆಂತ್, ಯಾಕೆಂದರೆ ನೀ ಯಾವಾಗಲೂ ನನ್ನ ಹತ್ತಿರವೇ ಇರುವೆ ಹಾಗೂ ನಿನ್ನ ಬಗ್ಗೆ ಮಾತಾಡಿಕೊಳ್ಳಲು ಮೆಘರಾಜನಂತಹ ಒಬ್ಬ ಒಳ್ಳೆ ಗೆಳೆಯನಿದ್ದಾನೆ....ಈ ಭೂಮಿತಾಯಿ,ಹಸಿರು ಹುಲ್ಲು,ಮರಗಿಡ,ಪಕ್ಷಿಗಳು,ಹಾಸ್ಟೆಲ್ಲಿನ ನಾಯಿ,ಬೆಕ್ಕುಗಳು ,ಮಾಳಿಗೆಯ ಮೇಲಿನ ಕಾಗೆಗಳು,ನಿಮಿಷಕ್ಕೊಮ್ಮೆ ಎಳೆಗಳ ಪಕ್ಕದಿಂದ ಸುಲಿಯುವ ತಂಗಾಳಿ ,ಚಳಿಇಂದ ತೆಪ್ಪಗೆ ಮಲಗಿರುವ ರೈಲ್ವೆ ಹಳಿ &ಅದರಲ್ಲಿನ ಜಲ್ಲಿ ಕಲ್ಲುಗಳು,ನನ್ನ ರೂಂ,ನನ್ನ ಬೆಡ್,ನನ್ನ ದಿಂಬು ಅಂಡ್ very imp ನನ್ನ MES TEXT BOOK ಕೂಡ ನನ್ನ ನಿನ್ನ ಮಾತುಗಳನ್ನು ಕದ್ದು ಕೇಳುತ್ತಿವೆ.. ನನಗೆ ಇನ್ನು ಏನೇನೋ ಮಾತಾಡಬೇಕಿದೆ,ಆದರೆ ಟೈಮ್ ಇಲ್ಲ.
ಮತ್ತೆ ಒಂದು ಸೋನೆಮಳೆ,ಒಂದು cold ಡೇ, ಒಂದು romantic mood ಹಾಗೂ ಮತ್ತೊಂದು ಪ್ರೀತಿಯ ಮಹಾಸ್ಪರ್ಶದೊಂದಿಗೆ ಭೇಟಿಯಾಗೋಣ...ಅಲ್ಲಿವರೆಗೆ ಬೈ ಬೈ....take care ..:):)
nice chenda ide
ReplyDeletemaLe sambhrama chennagide :)
ReplyDelete:) :) idu mugiyada sambhrama..
Delete