ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!
ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ..
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..
ಸುಡುಗಾಡು, ಈ ಆತ್ಮ ಉರಿಯುತ್ತದೆ..
ವಿರಹದುರಿ ಪದಪದದಲ್ಲೂ ಮಿಳಿತವಾಗಿದೆ, ಮಧುರ ಗಾಯದಂತೆ!
ReplyDeleteಚೆನ್ನಾಗಿದೆ.. ಇಷ್ಟ ಆಯ್ತು.. ಮತ್ತೆ ಗಮನ ಸೆಳೆಯಿತು ಆ ಪದಗಳು - "ಕೆನ್ನೆಯೆಲ್ಲ ಉಪ್ಪುಪ್ಪು" ಹ್ಹ ಹ್ಹ ಹ್ಹಾ ಮುಖಪುಸ್ತಕದಂತೆ ಮತ್ತೆ ಇಲ್ಲಿ ಅದೇ ತಲೆಹರಟೆ ಪ್ರಶ್ನೆ ಕೇಳಲ್ಲ ಬಿಡಿ :D ;)
ReplyDelete