ಹೋಳಿ
ಗುಲಾಲು ಹಚ್ಚಲು ಬಂದ ನಲ್ಲ...
ನಾನೆಂದೆ, ಬರೀ ಕಪ್ಪು, ಮತ್ತೊಂದಿಷ್ಟು ಬಿಳಿ
ಬದುಕೆಲ್ಲ..
ಈಗ ನಾ ಬಂದೆನಲ್ಲ
ಪ್ರೀತಿಯ ಕೆಂಪು, ವಿರಹದ ನೀಲಿ,
ಸ್ನೇಹದ ಹಳದಿ, ಮುನಿಸಿನ ಗುಲಾಬಿ..
ತುಂಬಿಕೊ ಉಡಿಯೆಲ್ಲ, ಇನ್ನು ಮೇಲೆ ಬಣ್ಣವೇ ಇಲ್ಲೆಲ್ಲ...
ಯುದ್ಧ
ಮೂರನೇ ಮಹಾಯುದ್ಧ
ಅವನ ಅವಳ ಮಧ್ಯ.. !!
ಕಾರಣ :
ಅವ ತೆಗೆಸಿದ್ದಾನೆ
ಇವಳಿಗೆಂದೇ ಬೆಳೆಸಿದ್ದ
ಕೋರೆ ಮೀಸೆ, ಕುರುಚಲು ಗಡ್ಡ.. (ಕ್ಲೀನ್ ಶೇವ್) !
ಸೇಡು :
ಕಿತ್ತು ಬಿಸಾಕಿದ್ದಾಳೆ
ಅವನ ನೆಚ್ಚಿನ ಮೂಗುತಿ..!!
ಅಷ್ಟೇ..
ನಿನ್ನ ವೀರ್ಯವ ಬಸಿರಲ್ಲಿ ಹೊತ್ತು
ಹನ್ನೆರಡು ಮಕ್ಕಳ ಹಡೆಯುವ ಬಯಕೆಯಿಲ್ಲ,
ನನ್ನ ಹೆಸರ ಮುಂದೆ ನಿನ್ನ ಅಡ್ಡಹೆಸರ
ತಳುಕು ಹಾಕಿಕೊಳ್ಳುವ ಖಯಾಲಿಯೂ ಇಲ್ಲ,
ಜೊತೆಗೇ ಬರುವ ನಿನ್ನ ಹೆಸರ ಹೊತ್ತ
ಕರಿಮಣಿ ಸರದ ಸಹವಾಸವಂತೂ ಬೇಡವೇ ಬೇಡ..
ನನಗೆ ಬೇಕಿರುವುದು
ನಾಲ್ಕು ಮಾತು, ಒಂದು ಜಗಳ, ಮತ್ತೆರೆಡು ನಗೆ..
ಅಷ್ಟೇ...
4.
ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!
ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ..
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..
ಸುಡುಗಾಡು, ಈ ಆತ್ಮ ಉರಿಯುತ್ತದೆ..
4.
ನಿನ್ನೆ ರಾತ್ರಿಯೆಲ್ಲ ನಿನ್ನದೇ ನೆನಪು
ಉರಿಯುವ ದೀಪದ ಜೊತೆ,
ಸುಡುಗಾಡು, ಈ ಆತ್ಮವೂ ಉರಿಯುತ್ತಿತ್ತು
ಜೀವರಸವೂ ಸೋರಿರಬಹುದು ಸ್ವಲ್ಪ
ಕಣ್ಣೀರು ಹರಿದಿತ್ತೇನೋ, ಕೆನ್ನೆಯೆಲ್ಲ ಉಪ್ಪುಪ್ಪು..!
ನಿನ್ನಗಲಿಕೆಯ ನೋವಿನ ತೀವ್ರತೆಗೆ
ನನ್ನ ವೀಣೆಯ ಶ್ರುತಿ ಮಿಡಿಯುವ
ಚಂದ್ರಕೌಂಸದ ಜುಗಲ್ ಬಂದಿ..
ನೆನಪ ಕೊಲ್ಲುವ ನೆಪದಲ್ಲಿ, ತಾನ್ ಗಳೆಲ್ಲ ಕರಗತ
ಸಾ ಗ ಮ ಧ ನಿ ಸಾ, ಸಾ ನಿ ಧ ಮ ಗ, ಮ ಗ ಸಾ ನಿ ಸಾ..!!
ಪೂರ್ವದಲ್ಲಿ ಸೂರ್ಯನ ಉದಯ, ಕಿಸಕ್ಕನೆ ನಗುತ್ತಾನೆ..
ಸುಡುಗಾಡು, ಈ ಆತ್ಮ ಉರಿಯುತ್ತದೆ..
ಮೂರಕ್ಕೂ ಸೇರಿ ಮುನ್ನೂರು ಮಾರ್ಕ್ಸು.
ReplyDelete