Wednesday, 16 January 2013

ಪ್ರೇಮ ಶ್ರಾವಣ 


ಕಣ್ನಿನ ರೆಪ್ಪೆಗಳಡಿಯಲಿ ನೆನಪಿನ ದೀಪಗಳ ಸಾಲು
ಸಾಕಾಗಿದೆ ಈ ನೆರಳು ಬೆಳಕಿನ  ಆಟದ ಗೀಳು …

ಅವ ಹೇಳುತ್ತಾನೆ, ವೇಳೆ ಇಲ್ಲ ಈಗ ಪ್ರೀತಿಗೆ
ಕೊಂಚ ಸಾವರಿಸಿಕೊ, ಸ್ವಲ್ಪ ತಡೆ
ಏನೇನೂ ಅವಸರಿಸಬೇಡ, ಈಗಲ್ಲ ಮುಂದಿದೆ ಪ್ರೇಮ ಶ್ರಾವಣದ ಹೋಳಿಗೆ…!!!
ನಾ ಕೇಳುತ್ತೇನೆ, ಪ್ರೇಮಕ್ಕೂ  timetabale ಲ್ಲೇ..??
ನೀ ಹೇಳಿದಾಗ  ಉಕ್ಕಿ ಬರದಿದ್ದರೆ ಈ ಭಾವ..??
ಕೊನೆಯಿಲ್ಲವೆ ಈ ಕಾಯುವಿಕೆಯ ಸಂಕೋಲೆಗೆ..??

ಅವ ನಗುತ್ತಾನೆ, ತುಟಿಯಂಚಲ್ಲೆ, ಕಣ್ನ ಸನ್ನೆಯಲ್ಲೇ..
ನಾ ಜ್ವಾಲಾಮುಖಿಯಾಗುತ್ತೇನೆ ನಿಂತಲ್ಲಿ
ಕಣ್ನಲ್ಲಿ ಲಾವಾರಸ  ಉಕ್ಕುತ್ತದೆ
ಮತ್ತೆ ಶಾಂತಿ ಸಮಾರೋಹ
ಕರಗುವಂತೆ ಮಾಡುತ್ತಾನೆ ತನ್ನ ಬಾಹುಬಂಧನದಲ್ಲಿ
ಮತ್ತು ಪಿಸುಗುಡುತ್ತಾನೆ ಕಿವಿಯಲ್ಲಿ
ಈಗಲ್ಲ ಮುಂದಿದೆ ಪ್ರೇಮ ಶ್ರಾವಣದ ಹೋಳಿಗೆ…!!!!


2 comments:

  1. You seem to have strong penchant for poetry.. :) Keep doing better.. Loads of wishes.

    ReplyDelete
  2. ಕಣ್ನಿನ ರೆಪ್ಪೆಗಳಡಿಯಲಿ ನೆನಪಿನ ದೀಪಗಳ ಸಾಲು
    ವೀಣಾಳ ಲೇಖನಿಯಲ್ಲಿ ಮೂಡಿಹುದು ಸುಂದರ ಸುಮದುರ ಸಾಲು....
    ಮುಚ್ಚಿಡದೆ ಬಿಚ್ಚಿಡು ನಿನ್ನ ಅಂತರಾಳದ ಸಾಲು....

    ReplyDelete