Tuesday, 17 July 2012

ಹೀಗೊಂದು ವಿಚಾರ ...

                                                  ಬೆಳಗ್ಗೆ ಎದ್ದು, ಎಂದಿನಂತೆ fever 104 FM ಗೆ ಟ್ಯೂನ್ ಮಾಡಿದೆ, Mad Mornings ನ  RJ ಶ್ರದ್ಧಾಳ ತಲೆಹರಟೆ ಕೇಳಿ ಮೂಡ್ ಫ್ರೆಶ್ ಆಯಿತು, ಆಗ ಬಂತು ಒಂದು  ಕಮರ್ಶಿಅಲ್.. ಅತ್ತ ಕಡೆಇಂದ ಒಬ್ಬ ಹೆಣ್ಣು ಮಗಳು ಹೇಳುತ್ತಾಳೆ..
  ("'when my mom was pregnant, my buwa (ಅತ್ತೆ ), maasi. grandma, everybody was there..
     now its my turn and my mom cannot be with me'')...

 ಇತ್ತ ನಿರೂಪಕ ಹೇಳುತ್ತಾನೆ ("now u dont have to worry , Manipal Hospitals proudly presents Motherly care          away from home, Comprehensive motherly care & delivery care.. MAKES YOUR MOTHERHOOD HAPPY AND JOYFUL")...

 ಇದನ್ನು ಕೇಳುತ್ತ ಹಲ್ಲು  ಉಜ್ಜುತ್ತಿದ್ದ  ನನ್ನ ತಲೆಯಲ್ಲಿ ವಿಚಾರಧಾರೆ ಶುರುವಾಯಿತು..ಏನಿದು ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದೆ,  ಯಾವ   ತಾಯಿಗೆ ತಾನೇ ತನ್ನ ಮಗಳು ತಾಯ್ತನವನ್ನು ಸಂಭ್ರಮಿಸುವುದನ್ನು ನೋಡಲು ಇಷ್ಟವಿರುವುದಿಲ್ಲವೇ ? ಒಂದು ವೇಳೆ ತಾಯಿ ಇಲ್ಲದಿದ್ದರೂ  ಮನೆಯವರೆಲ್ಲ ಬಾಣಂತಿಯ ಆರೈಕೆಗೆ ಟೊಂಕಕಟ್ಟಿ ನಿಲ್ಲುವುದಿಲ್ಲವೇ,  ಅದು  ಎಂಥ ದೊಡ್ಡ ಆಸ್ಪತ್ರೆಯಾದರು ಮನೆಯಂಥ ವಾತಾವರಣ ನೀಡಲು ಸಾಧ್ಯವೇ ಹೀಗೆ ಇನ್ನು ಏನೇನೋ  ವಿಚಾರ ಮಾಡುತ್ತಾ , ಆ ಜಾಹೀರಾತು ಮಾಡಿದವನ ಶಾಣ್ಯಾತನ ಮೆಚ್ಚ್ಚಿಕೊಂಡೆ.. ಅಷ್ಟರಲ್ಲಿ  ನನ್ನ  ಫೋನು ರಿಂಗಿಸಿತು, ನೋಡಿದರೆ  ಹನುಮಂತನ  ಕಾಲ್,  ರಿಸೀವ್ ಮಾಡಿದೆ, ಆ ಕಡೆ ಇಂದ ಸಿಟ್ಟಿನ ಧ್ವನಿ "ಏ  ಎಲ್ಲದೀ ನೀ, ಹೊತ್ತು  ಗೊತ್ತು ಐತಿಲ್ಲ  ನಿಂಗ".. ಆ ಓತಪ್ರೋತ ತಡೆದು ಹೇಳಿದೆ "ಹಂಗ್ಯಾಕೋ, ತಡಿಲಾ ಬರ್ತೀನಿ, I'll be there in bus stop by 15 min" ಎಂದು ಹೇಳಿ  ಫೋನ್ ಕುಕ್ಕಿದೆ..

 ಬೇಗ ಬೇಗ ಸ್ನಾನ ಮುಗಿಸಿ, ಕೈಗೆ ಸಿಕ್ಕಿದ jeans, top  ಏರಿಸಿಕೊಂಡು ರೆಡಿ ಆಗಿ,  ಪಟ್ ಪಟ್  ಕೆಳಗಿಳಿದು  ಬನಶಂಕರಿ ಸ್ಟಾಪ್ ಕಡೆ ಓಡಿದೆ,  ಅಲ್ಲೇ ಕಾಯುತ್ತಿದ್ದ ಹನುಮಂತ  ಸಿಟ್ಟಿನಿಂದಲೇ ಬರಮಾಡಿಕೊಂಡ, "ಹಿಂಗ್ಯಾಕ ಮಾಡ್ತಿಯೋ ತಮ್ಮ್ಯಾ"   ಅನ್ನುತ್ತಿದ್ದ ನನ್ನನ್ನು ತಡೆದು, ನಡಿ ಬಸ್ ಹತ್ತು ಎಂದು  ಓಡುತ್ತಿದ್ದ ಬಸ್  ತೋರಿಸಿದ. ಪುಣ್ಯಕ್ಕೆ  ಬಂದ  ತಕ್ಷಣ ಸಿಕ್ಕಿತಲ್ಲ 375 ಅಂದುಕೊಂಡು ಓಡಿ  ಹೋಗಿ ಹತ್ತಿದೆ. ತುಂಬಿ  ತುಳುಕುತ್ತಿದ್ದ ಬಸ್ನಲ್ಲಿ   ಹಾಗೂ ಹೀಗೂ  ಜಾಗ ಮಾಡಿಕೊಂಡು  ನಿಂತು  ಮತ್ತೆ ear phone ಕಿವಿಗೆ ಏರಿಸಿದೆ, once again the same add...!!!  ಕೆಂಗೇರಿ ಕಡೆ ಹೋಗುತ್ತಿದ್ದ ಬಸ್ ನ  ಜೊತೆ ನನ್ನ ತಲೆಯೂ ಎಲ್ಲೆಲ್ಲೋ ಹೊರಟಿತು..

  ಏನಿದು, ಬೆಂಗಳೂರಿನ ಮಾಯೆಯೋ ಅಥವಾ ಅತಿಯಾದ ಜಾಗತೀಕರಣವೋ??  ಎಲ್ಲವೂ ವ್ಯಾಪಾರಮಯ,ಈ  ಅಪಾರ್ಟಮೆಂಟಗಳು, ಮಾಲ್ ಗಳು, ಜೀವನ ಶೈಲಿ, ಜನ ಮರುಳೋ,  ಜಾತ್ರೆ ಮರುಳೋ  ಎನ್ನುವಂತಿದೆ. ಹೇಗೆ ಮಾನವ ಸಂಬಂಧಗಳು, ಪರಸ್ಪರರ ನಡುವಿನ ಅಪ್ಯಾಯತೆಗಳು ಬಿಕರಿಯಾಗುತ್ತಿವೆ ಎನಿಸಿತು.

ನಾನು ಚಿಕ್ಕವಳಿದ್ದಾಗ ನೋಡಿದ್ದೇನೆ, ನನ್ನ ದೊಡ್ಡಪ್ಪನ ಮಕ್ಕಳು,ಮಾವನ ಮಕ್ಕಳು ಬಸುರಿಯಾದಾಗ, ಇಡೀ ಕುಟುಂಬವೇ, ಹೊಸ ಕುಡಿಯ ಬರುವಿಕೆಯ ಸಂಭ್ರಮಾಚರಣೆ ನಡೆಸುತ್ತಿದ್ದರು. ಗರ್ಭಿಣಿ ಹೆಂಗಸಿನ ಬಯಕೆಗಳನ್ನು ತೀರಿಸಲು , ಕೇವಲ ಮನೆಯವರಷ್ಟೇ ಅಲ್ಲ, ಆ ಓಣಿಯ ಉಳಿದ ಮನೆಯವರೆಲ್ಲ ತಯಾರಿರುತ್ತಿದ್ದರು..  ದಿನಾ ಒಂದೊಂದು ಮನೆಯಿಂದ ಘಮ ಘಮ ಅಡುಗೆಗಳು, ತಿಂಡಿ ತಿನಿಸುಗಳು ಮನೆ ಬಾಗಿಲಿಗೆ ಬರುತ್ತಿದ್ದವು..ಹಾಡು ಹಸೆ ಎಂದು ಮನೆಯಲ್ಲಿ ದಿನಾ ಏನಾದರೊಂದು ಪ್ರೋಗ್ರಾಮ್ ಇರುತ್ತಿತ್ತು.. ಇನ್ನು ಮಗು  ಮೇಲಂತೂ ಮುಗಿಯಿತು, ಬಾಣಂತಿಯ ಚಾಕರಿಗೆ  ಮಗುವಿನ ಆರೈಕೆಗೆ  ಎಲ್ಲರೂ ಸನ್ನದ್ಧರಾಗಿರುತ್ತಿದ್ದರು.. ಇದನ್ನೆಲ್ಲಾ ನೋಡಿ ನಾನೂ ಸಂಭ್ರಮಿಸಿದ್ದಿದೆ.. ಇಂಥಾ ಆತ್ಮೀಯತೆ, ಅಪ್ಪ್ಯಾಯಮಾನತೆಗಳು, ಆ ಸೊಗಡು, ಹರುಷಗಳು ಒಂದು ಆಸ್ಪತ್ರೆಯಲ್ಲಿ ಹೇಗೆ ತಾನೇ ಸಿಕ್ಕಾವು.??


 ಈ ಬೆಂಗಳೂರಿನಲ್ಲಿ ನೋಡಿದ್ದೇನೆ, ಎಲ್ಲರಿಗು ತುಂಬಾ ಅರ್ಜೆಂಟ್, ಯಾವಾಗಲೂ ಎಲ್ಲರೂ ಓಡುತ್ತಿರುತ್ತಾರೆ.. ಎಲ್ಲಿಗೆ, ಯಾಕೆ  ಅಂತ ಖಂಡಿತ ನನಗಂತೂ ಗೊತ್ತಿಲ್ಲ, ಬಹುಶಃ ಅವರಿಗೂ ಗೊತ್ತಿಲ್ಲ ಅಂದುಕೊಳ್ಳುತ್ತೇನೆ (ಯಾಕೆಂದರೆ ಯೋಚಿಸಲು ಅವರ ಬಳಿ ಸಮಯ ಇರುವುದಿಲ್ಲ..:))
 ಮೊನ್ನೆ ಒಂದು ಪಾಪು( ಒಂದು 2-3 ವರ್ಷ ಇರಬಹುದು)  ಹೇಳುತ್ತಿತ್ತು, "ಪಪ್ಪಾ ಆಪೀಚ್, ಮಮ್ಮಿ ಆಪೀಚ್, ನಾನು ಬೇಬಿ ಸಿಟ್ಟಿಂಗ್" ಅದನ್ನು ಕೇಳಿ ಪಾಪ  ಎನಿಸಿತು..ಈ ಬ್ಯುಸಿ ಲೈಫ್, ದುಡ್ಡು ಮಾಡುವ ಧಾವಂತಗಳು ಜನರನ್ನು ಕಾಣದ ಕುದುರೆಯ ಬೆನ್ನು ಹತ್ತುವಂತೆ ಮಾಡಿವೆ, ಕುಟುಂಬಗಳು ತಮ್ಮ ಕೊಂಡಿ ಕಳಚಿಕೊಳ್ಳುತ್ತಿವೆ ಎಂದು ಅನಿಸಿ ಒಂಥರಾ ಸಂಕಟವಾಯಿತು..


                                                        ಇದೆಲ್ಲದಕ್ಕೂ ಯಾರು ಹೊಣೆ, ಯಾರನ್ನು ದೂರಬೇಕು ತಿಳಿಯುವುದಿಲ್ಲ.. May be ಈ ಬೆಲೆ ಏರಿಕೆ, ಜಾಗತೀಕರಣ, ಅಣಬೆಗಳಂತೆ ತಲೆ ಎತ್ತುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವು ನಮ್ಮ ಜನಗಳನ್ನು ಒಂದು ವಿಚಿತ್ರ ಜೀವನಶೈಲಿಯ  ಸೆಳೆತಕ್ಕೆ ಎಳೆಯುತ್ತಿರುವುದು ಇನ್ನೂ ಏನೇನೋ ಇರಬಹುದು.. ಆದರೆ ಈ 21ನೇ ಶತಮಾನದಲ್ಲಿರುವ, ಅದೂ ಬೆಂಗಳೂರಿನಲ್ಲಿರುವ ನಾವು "We have no choice".. ವೇಗವಾಗಿ ಬೆಳೆಯುತ್ತಿರುವ ಈ ಊರಿನ ಜೊತೆ ನಾವೂ ಹೆಜ್ಜೆ ಇಡಲೇ ಬೇಕು..(ಅಟ್ ದ  ಕಾಸ್ಟ್ ಆಫ್ ಹ್ಯಾಪಿನೆಸ್ಸ್)..

  ಮತ್ತೆ ಫೋನ್ ರಿಂಗಿಸಿತು, ಆ ಕಡೆಯಿಂದ ಅಪ್ಪಾಜಿ, "ಎಲ್ಲಿ ಅದಿ ಬೇ" ಎಂದರು.."ಹಾ ಅಪ್ಪಾಜಿ ಬಸ್ ನ್ಯಾಗ ಅದಿನಿ ರೀ, ಅದ ಹೇಳಿದ್ದೆ ಅಲ್ಲಾ JSS ಕಾಲೆಜದಾಗ Quality-six sigma ಪ್ರೋಗ್ರಾಮ್ ಐತಿ ಅಂತ್, ಅಲ್ಲಿಗೆ ಹೊಂಟಿನಿ" ಅಂದೆ.."ಒಂದು ಮೇಲ್ id ಕಳಸ್ತೀನಿ, ಅದಕ್ಕ ಫೋಟೋ, ಬಯೋಡಾಟಾ ಕಳಸ್ ನಿಂದು, ಹುಡುಗ ಛಲೋ ಅದಾನಂತ " ಅಂತ ಹೇಳಿ  ಫೋನ್ ಇಟ್ಟರು. 
                                                              ನನಗೆ ಅನುರೂಪವಾದ ಒಂದು ಗಂಡುಜೀವವನ್ನು  ಹುಡುಕಲು ಶತಾಯಗತಾಯ  ಪ್ರಯತ್ನಿಸುತ್ತಿರುವ ಅಪ್ಪನನ್ನು ನೆನಸಿಕೊಂಡು ಮನದಲ್ಲೇ ನಕ್ಕು, ಈಗ ಒಬ್ಬಳೇ ಓಡುತ್ತಿರುವೆ, ಮುಂದೆ ಗಂಡನ ಜೊತೆ ಓಡಬೇಕಲ್ಲ ಎಂದುಕೊಳ್ಳುತ್ತ ನಗು ಬಂತು.. ಹಾಗೇ  ಸ್ಟಾಪ್ ಬಂದಿದ್ದರಿಂದ ಕೆಳಗಿಳಿದೆ, ಮಂದಹಾಸ ನೋಡಿ ಹನುಮಂತ "ಏನಾತು" ಅಂದ... ಏನಿಲ್ಲ ನಡಿ, time ಆತು ಅಂತ ಹೇಳಿ, ಅಷ್ಟು ದೂರ ಕಾಣುತ್ತಿದ್ದ JSSATI ಕಡೆಗೆ ದಾಪುಗಾಲು ಹಾಕಿದೆವು....


 NOTE:  ಸ್ನೇಹಿತರೆ ಇದು, ನನಗನಿಸಿದ, ಬೆಂಗಳೂರಿನ ಕೇವಲ ಒಂದು ಮುಖ ಮಾತ್ರ.. ನನಗೆ ಬೆಂಗಳೂರಿನ ಬಗ್ಗೆ ಅತಿಯಾದ ಪ್ರೀತಿ, ತುಂಬಾ ಅಭಿಮಾನಗಳಿವೆ..ಅಂತೆಯೇ  ನನ್ನ ಮುಂದಿನ ಪೋಸ್ಟ್ ನಲ್ಲಿ  ಅದನ್ನೆಲ್ಲ ಪ್ರಸ್ತುತ  ಪಡಿಸುತ್ತೇನೆ.. ಕಾದು ನೋಡಿ....:):):)