ಹುಡುಗಾ,
ಬಹುದಿನಗಳಿಂದ ಕಾಡುತ್ತಿರುವ ಒಂದು ಯಕ್ಷ ಪ್ರಶ್ನೆ,
ಎಲ್ಲಿ ಹೋದರೂ ನಿನ್ನನ್ನೇ ಕಾಣುವ ಈ ಜೀವದ ಅಸ್ತಿತ್ವದ
ಅರಿವು ಕೊಂಚವಾದರೂ ಇದೆಯೆ ನಿನಗೆ???
ಚಕಿತಳಾಗುತ್ತೇನೆ,
ನಿನ್ನ ನಿರ್ದಯಿ ಹೃದಯ ಮತ್ತು ಅದರ ಜಾಣ ಕುರುಡು ಕಂಡು...
ನನ್ನ ಹಪಾಹಪಿಗಳು, ಹಸಿಕನಸುಗಳು, ಕೂಡಿ ಕಳೆದು
ಮಾಡಿಕೊಳ್ಳುವ ತಯಾರಿಗಳು..
ಗಂಟಲಲ್ಲೇ ಬಿದ್ದು ಸಾಯುತ್ತಿರುವ ಸಾವಿರ ಮಾತುಗಳು..
ಯಾವುದು, ಯಾವುದೂ ಕಾಣುತ್ತಿಲ್ಲವೇ? ಕೆಳುತ್ತಿಲ್ಲವೇ??
ನಿನಗೊಂದು ಸಲಹೆ
ನಿನ್ನ ಹೃದಯಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ,
ಆಗಲಾದರೂ ನೀನು ಸರಿಹೋಗಬಹುದೇನೋ
ಎಂಬ ಪುಟ್ಟ ಆಸೆ, ದಿವ್ಯ ನಿರೀಕ್ಷೆ...
ಆದರೂ ಒಂದು ಸಲ ಹೇಳಿ ಬಿಡು
ಈ ಜೀವದ ಅಸ್ತಿತ್ವದ ಅರಿವು
ಕೊಂಚವಾದರೂ ಇದೆಯೆ ನಿನಗೆ???